ನಿನ್ನೆ, ಇಂದು, ನಾಳೆ ಎಲ್ಲಾ ನೆನಪುಗಳು: ಎ.ಆರ್. ರೆಹಮಾನ್

ನಿನ್ನೆ, ಇಂದು, ನಾಳೆ ಕಳೆದ 25 ವರ್ಷಗಳ ಸಂಗೀತ ಪಯಣದ ನೆನಪುಗಳು ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್..
ಎ.ಆರ್ ರೆಹಮಾನ್
ಎ.ಆರ್ ರೆಹಮಾನ್
ಮುಂಬಯಿ: ನಿನ್ನೆ, ಇಂದು, ನಾಳೆ  ಕಳೆದ 25 ವರ್ಷಗಳ ಸಂಗೀತ ಪಯಣದ ನೆನಪುಗಳು ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಹೇಳಿದ್ದಾರೆ.
ಸಂಗೀತ ಪಯಣದಲ್ಲಿ ಕಳೆದ ತಮ್ಮ 25 ವರ್ಷ ಅವಿಸ್ಮರಣೀಯವಾಗಿವೆ ಎಂದು ಎಂದು 2010 ರ ಪದ್ಮ ಭೂಷಣ್ ಪ್ರಶಸ್ತಿ ಪುರಸ್ಕೃತ ರೆಹಮಾನ್ ತಿಳಿಸಿದ್ದಾರೆ. ತಮ್ಮ ಪಯಣದಲ್ಲಿ ಸಹಕರಿಸಿದ ಅಭಿಮಾನಿಗಳು, ಸ್ನೇಹಿತರು, ಕುಟುಂಬ ಸದಸ್ಯರು ಪ್ರತಿಯೊಬ್ಬರು ತಮಗೆ ಸ್ಪೂರ್ತಿ ಎಂದು ತಿಳಿಸಿದ್ದಾರೆ.
ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ, ಬಿಎಎಫ್ ಟಿಎ ಪ್ರಶಸ್ತಿ, ಗೋಲ್ಡನ್ ಗ್ಲೋಬ್, 4 ರಾಷ್ಚ್ರೀಯ ಚಲನಚಿತ್ರ ಪ್ರಶಸ್ತಿ, 15 ಫಿಲ್ಮ್ ಫೇರ್ ಪ್ರಶಸ್ತಿ, ಮತ್ತು 15 ಸೌತ್ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಎ.ಆರ್ ರೆಹಮಾನ್ ಗಳಿಸಿದ್ದಾರೆ.
ಜುಲೈ 8 ರಂದು ಲಂಡನ್ ನ ವೆಂಬ್ಲಿಯಲ್ಲಿ ಸಂಗೀತ ಮಾಂತ್ರಿಕ ರೆಹಮಾನ್ ಜರ್ನಿ ರೋಜಾ ಮತ್ತು ಕಾತ್ರು ವೆಲೆಯಿದೈ ಸಿನಿಮಾದ ಹಿಟ್ ಹಾಡುಗಳಿಂದ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com