ಪ್ರಭಾಸ್ ಸಿನೆಮಾ ನಿರ್ದೇಶಿಸಲಿದ್ದಾರೆಯೇ ಪ್ರಭುದೇವ?

ವದಂತಿಗಳ ಪ್ರಕಾರ ಸದ್ಯಕ್ಕೆ ಸುಜೀತ್ ರೆಡ್ಡಿ ಅವರ 'ಸಾಹೋ' ಸಿನೆಮಾದಲ್ಲಿ ನಟಿಸುತ್ತಿರುವ 'ಬಾಹುಬಲಿ' ಸಿನೆಮಾ ಖ್ಯಾತಿಯ ನಟ ಪ್ರಭಾಸ್, ಪ್ರಭುದೇವ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ
ಪ್ರಭುದೇವ-ಪ್ರಭಾಸ್
ಪ್ರಭುದೇವ-ಪ್ರಭಾಸ್
ಬೆಂಗಳೂರು: ವದಂತಿಗಳ ಪ್ರಕಾರ ಸದ್ಯಕ್ಕೆ ಸುಜೀತ್ ರೆಡ್ಡಿ ಅವರ 'ಸಾಹೋ' ಸಿನೆಮಾದಲ್ಲಿ ನಟಿಸುತ್ತಿರುವ 'ಬಾಹುಬಲಿ' ಸಿನೆಮಾ ಖ್ಯಾತಿಯ ನಟ ಪ್ರಭಾಸ್, ಪ್ರಭುದೇವ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. 
ಬಾಹುಬಲಿ ಖ್ಯಾತಿಯ ನಟನನ್ನು ನಿರ್ದೇಶಿಸಲು ನನಗು ಇಷ್ಟ ಎಂದು ಈ ಹಿಂದೆ ನಟ-ನೃತ್ಯಗಾರ ಪ್ರಭುದೇವ ಹೇಳಿದ್ದರು. ಪ್ರಭಾಸ್ ತಮ್ಮ ನೆಚ್ಚಿನ ಗೆಳೆಯರಾಗಿದ್ದು, ಇಬ್ಬರೂ ಒಟ್ಟಿಗೆ ತೆಲುಗು ಮತ್ತು ತಮಿಳಿನಲ್ಲಿ ಸಿನೆಮಾ ಮಾಡಲಿದ್ದೇವೆ ಎಂದು ಪ್ರಭುದೇವ ಹೇಳಿದ್ದಾರೆ ಎಂದು ಕೂಡ ವರದಿಯಾಗಿತ್ತು. 
ಈಗ ಮೂಡಲಿದೆ ಎನ್ನಲಾಗಿರುವ ಸಿನೆಮಾ ತೆಲುಗುನಲ್ಲಿ ಮಾತ್ರ ಬರುತ್ತದೆಯೇ ಅಥವಾ ತಮಿಳು ಹಿಂದಿ ಭಾಷೆಗಳಲ್ಲಿಯೂ ಮೂಡಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. 
ಈ ಹಿಂದೆ ಪ್ರಭುದೇವ ಅವರ ಹಿಂದಿ ಆಕ್ಷನ್ ಚಿತ್ರ 'ಜಾಕ್ಸನ್' ನಲ್ಲಿ ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com