ಮಲಯಾಳಂ ನಟಿ 'ಜಾಕಿ' ಭಾವನಾ ನಿಶ್ಚಿತಾರ್ಥ!

ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜತೆ ಜಾಕಿ ಚಿತ್ರದಲ್ಲಿ ನಟಿಸಿದ್ದ ಮಲಯಾಳಂ ನಟಿ ಭಾವನಾ ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ...
ಭಾವನಾ-ನವೀನ್
ಭಾವನಾ-ನವೀನ್
Updated on: 
ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜತೆ ಜಾಕಿ ಚಿತ್ರದಲ್ಲಿ ನಟಿಸಿದ್ದ ಮಲಯಾಳಂ ನಟಿ ಭಾವನಾ ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 
ಕನ್ನಡದ ನಿರ್ಮಾಪಕ ನವೀನ್ ಎಂಬುವರ ಜತೆ ಭಾವನಾ ಕೊಚ್ಚಿಯಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯೊಂಬಂತೆ ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥದ ಫೋಟೋ ಹರಿದಾಡುತ್ತಿದೆ. ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ನಿಶ್ಚಿತಾರ್ಥದ ವರದಿ ಮಾಡಿದೆ.
ಕನ್ನಡದ ರೋಮಿಯೋ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ಭಾವನಾ ಜತೆಯಾಗಿ ನಟಿಸಿದ್ದು ಈ ಚಿತ್ರವನ್ನು ನವೀನ್ ನಿರ್ಮಿಸಿದ್ದರು. ಅಲ್ಲಿಂದ ಇವರ ನಡುವೆ ಪ್ರೇಮಾಂಕುರವಾಗಿತ್ತು. ನಾಲ್ಕು ವರ್ಷಗಳ ಪ್ರೇಮ ಇದೀಗ ಪ್ರೇಮ ವಿವಾಹಕ್ಕೆ ಸಾಕ್ಷಿಯಾಗಿದೆ. 
ಕುಟುಂಬಸ್ಥರ ಸಮ್ಮುಖದಲ್ಲಿ ಭಾವನಾ ನವೀನ್ ನಿಶ್ಚಿತಾರ್ಥ ನಡೆಸಿದ್ದು ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com