ನಟಿಯೊಂದಿಗೆ ಆಫ್ರಿಕಾ ಪ್ರಜೆಯಿಂದ ಅಸಭ್ಯ ವರ್ತನೆ!

ಕನ್ನಡದ ನಟಿಯೊಂದಿಗೆ ಆಫ್ರಿಕಾದ ಯುವಕನೋರ್ವ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕನ್ನಡದ ನಟಿಯೊಂದಿಗೆ ಆಫ್ರಿಕಾದ ಯುವಕನೋರ್ವ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಸ್ವತಃ ನಟಿ ಶ್ವೇತಾ ಪಂಡಿತ್ ಅನುಭವ ಹೇಳಿಕೊಂಡಿದ್ದು, ಶಾಪಿಂಗ್‌ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಅಫ್ರಿಕನ್‌ ಮೂಲದ ಯುವಕನೊಬ್ಬ ಅಸಭ್ಯವಾಗಿ ನಡೆದುಕೊಂಡಿದ್ದ ಎಂದು ಹೇಳಿದ್ದಾರೆ. ಉರ್ವಿ' ಚಿತ್ರದಲ್ಲಿ ತಮ್ಮ  ಪಾತ್ರದ ಕುರಿತು ಮಾತನಾಡುವ ವೇಳೆ ಘಟನೆ ಕುರಿತು ವಿವರಿಸಿದ ನಟಿ ಶ್ವೇತಾ ಪಂಡಿತ್, "ಯಲಹಂಕ ಉಪನಗರದ ಮನೆ ಬಳಿ ಇರುವ ಸೂಪರ್‌ ಮಾರ್ಕೆಟ್‌ ಗೆ ತಾಯಿಯೊಂದಿಗೆ ತೆರಳಿದ್ದೆ. ಶಾಪಿಂಗ್‌ ಮುಗಿಸಿ ಮನೆಗೆ  ಹಿಂತಿರುಗುವಾಗ ಏನೋ ಬಿಟ್ಟು ಬಂದ ಕಾರಣ ಅವರ ತಾಯಿ ವಾಪಸ್‌ ತೆರಳಿದ್ದರು. ನಾನು ರಸ್ತೆಯಲ್ಲಿಯೇ ನಿಂತುಕೊಂಡು ಅಮ್ಮನಿಗಾಗಿ ಕಾಯುತ್ತಿದೆ. ಆಗ ಬೈಕ್‌ನಲ್ಲಿ ಬಂದ ಆಫ್ರಿಕಾ ಯುವಕನೊಬ್ಬ ‘ಆರ್‌ ಯೂ ಕಮಿಂಗ್‌...?'  ಎಂದು ಅಸಭ್ಯವಾಗಿ ಕರೆದ. ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದೆ ಹೋಗುತ್ತಿದ್ದೆ. ಮತ್ತೆ ಎದುರಿಗೆ ಬಂದು ಬೈಕ್‌ ಅಡ್ಡ ಹಾಕಿದ. ‘ಹು ಆರ್‌ ಯೂ...?' ಎಂದು ಜೋರು ಮಾಡಿದೆ. ಪೊಲೀಸರನ್ನು ಕರೆಯುವುದಾಗಿ ಹೇಳಿದೆ.  ಆದರೂ ಆ ಯುವಕ ಅಲ್ಲಿಯೇ ನಿಂತುಕೊಂಡಿದ್ದ. ಇದರಿಂದ ಭಯವಾಗಿ ದಿಕ್ಕು ತೋಚದಂತಾಯಿತು. ಇನ್ನೇನು ರಸ್ತೆಯಲ್ಲಿದ್ದ ಕಲ್ಲು ತೆಗೆದು ಹೊಡೆಯಬೇಕು ಎನ್ನಿಸಿತು. ಕ್ರೈಮ್‌ ಬೇಡ ಎಂದು ಸುಮ್ಮನಾದೆ. ಅಷ್ಟರಲ್ಲಿ ಆ ಯುವಕ  ಅಲ್ಲಿಂದ ಹೊರಟ ಹೋದ ಎಂದು ಹೇಳಿದ್ದಾರೆ.

ಈ ಹಿಂದೆಯೂ ಸಾಕಷ್ಟು ಬಾರಿ ಬೆಂಗಳೂರಿನಲ್ಲಿ ಇಂತಹ ಘಟನೆಗಳು ಬೆಳಕಿಗೆ ಬಂದಿದ್ದು, ಹೊಸ ವರ್ಷಾಚರಣೆ ವೇಳೆ ಪುಂಡರ ಆಟದ ವಿಚಾರ ಇನ್ನೂ ಹಸಿರಾಗಿರುವಾಗಲೇ ಇಂತಹ ಹಲವು ಪ್ರಕರಣಗಳು ದಾಖಲಾಗುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com