

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಪುತ್ರ ನಿಖಿಲ್ ಕುಮಾರ್ ಅವರ ಮುಂದಿನ ಚಿತ್ರಕ್ಕೆ ಚೇತನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾಗ್ವಾರ್ ಸಿನಿಮಾ ಬಿಡುಗಡೆ ನಂತರ ಸಿಟಿ ಎಕ್ಸ್ ಪ್ರೆಸ್ ಜೊತೆಗಿನ ಸಂದರ್ಶನದ ವೇಳೆ ಉತ್ತಮ ನಿರ್ದೇಶಕರುಗಳ ಜೊತೆ ಹೊಸ ಪ್ರಾಜೆಕ್ಟ್ ಆರಂಭಿಸುವುದಾಗಿ ನಿಖಿಲ್ ಹೇಳಿದ್ದರು. ಅದರಂತೆ ಎಸ್. ಕೃಷ್ಣ, ಎ. ಹರ್ಷ ಮತ್ತು ಚೇತನ್ ಕುಮಾರ್ ಜೊತೆ ಕೆಲಸ ಮಾಡಲು ನಿಖಿಲ್ ಇಚ್ಚೆ ವ್ಯಕ್ತ ಪಡಿಸಿದ್ದರು. ಮೂರು ನಿರ್ದೇಶಕರ ಜೊತೆ ಕೆಲ ಸುತ್ತಿನ ಮಾತುಕತೆಗಳು ಕೂಡ ನಡೆದಿತ್ತು.
ಸದ್ಯ ನಿಖಿಲ್ ಗೆ ಚೇತನ್ ಸ್ಕ್ರಿಪ್ಟ್ ಇಷ್ಟವಾಗಿದ್ದು, ಅವರ ಜೊತೆ ಕೆಲಸ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮೇ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಆದರೆ ಈ ಸಂಬಂಧ ನಿಖಿಲ್ ಆಗಲಿ ಅಥವಾ ನಿರ್ದೇಶಕ ಚೇತನ್ ಆಗಲಿ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ,
ಮೂಲಗಳ ಪ್ರಕಾರ ಚೇತನ್ ಕುಮಾರ್ ಅವರ ಕಥೆ ನಿಖಿಲ್ ಮತ್ತು ಅವರ ತಂದೆ ಕುಮಾರ ಸ್ವಾಮಿ ಅವರಿಗೆ ಹಿಡಿಸಿದೆಯಂತೆ. ಕಥೆ ಮಾಸ್ ಎಂಟರ್ಟೈನರ್ ಆಗಿದ್ದು ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆಯಂತೆ.
ತೆಲುಗು ನಿರ್ದೇಶಕರುಗಳು ನಿಖಿಲ್ ಗೆ ಹಲವು ಕಥೆ ಆಫರ್ ನೀಡಿದ್ದರಂತೆ. ಆದರೆ ನಿರ್ದೇಶಕರುಗಳಾದ ಹರ್ಷ ಮತ್ತು ಚೇತನ್ ಅವರ ಕಥೆ ಮಾತ್ರ ನಿಖಿಲ್ ಗೆ ಸರಿ ಹೊಂದುತ್ತದೆ ಎಂದು ಹೇಳಲಾಗಿದೆ,
ಚೇತನ್, ಬಹದ್ದೂರ್, ಭರ್ಜರಿ ಸಿನಿಮಾ ನಿರ್ದೇಶಿಸಿದ್ದಾರೆ. ಹೀಗಾಗಿ ನಿಖಿಲ್ ಮುಂದೆ ಯಾವ ಹೆಜ್ಜೆ ಇಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.