ಸಾಧು ಕೋಕಿಲಾ
ಸಿನಿಮಾ ಸುದ್ದಿ
ಚಂದ್ರಾ ಲೇಔಟ್ ಪೊಲೀಸರಿಂದ ನಟ ಸಾಧು ಕೋಕಿಲಾ ಕಾರು ಚಾಲಕನ ಬಂಧನ
ಪ್ರಸಿದ್ಧ ಕಾಮಿಡಿ ನಟ ಸಾಧು ಕೋಕಿಲಾ ಅವರ ಕಾರು ಚಾಲಕ ವಿಜಯ್ ಕುಮಾರ್ ಅಲಿಯಾಸ್ ಗಜ ಎಂಬಾತನನ್ನು ಚಂದ್ರಾಲೇಔಟ್...
ಬೆಂಗಳೂರು: ಪ್ರಸಿದ್ಧ ಕಾಮಿಡಿ ನಟ ಸಾಧು ಕೋಕಿಲಾ ಅವರ ಕಾರು ಚಾಲಕ ವಿಜಯ್ ಕುಮಾರ್ ಅಲಿಯಾಸ್ ಗಜ ಎಂಬಾತನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಕಾರಿನಲ್ಲೇ ಕಳ್ಳತನ ಮಾಡಿ ಈತ ಸಿಕ್ಕಿ ಬಿದ್ದಿದ್ದಾನೆ. ಕಾರಿನಲ್ಲಿಟ್ಟಿದ್ದ 1.5 ಲಕ್ಷ ರೂ. 300 ಅಮೆರಿಕನ್ ಡಾಲರ್ ಹಣ ಮತ್ತು ಲ್ಯಾಪ್ ಟಾಪ್ ಒಂದನ್ನು ಈತ ಕಳ್ಳತನ ಮಾಡಿದ್ದ.
ಸಾಧು ಕೋಕಿಲಾ ಸಹೋದರಿ ಮನೆಗೆ ಹೋಗಿದ್ದಾಗ ವಿಜಯ್ ಕುಮಾರ್ ಗೆ ಕಾರು ಹೊರಗಡೆ ನಿಲ್ಲಿಸಲು ಹೇಳಿ ಸಾಧು ಮನೆಯೊಳಗೆ ಹೋಗಿದ್ದರು. ಈ ಸಂದರ್ಭದಲ್ಲಿ ಚಾಲಕ ಕಾರಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಮತ್ತು ಹಣವನ್ನು ತನ್ನ ಮನೆಗೆ ಸಾಗಿಸಿದ್ದ.ಈ ಸಂಬಂಧ ಸಾಧು ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ನಂತರ ಚಾಲಕನೇ ಕೃತ್ಯವೆಸಗಿದ್ದು ಬೆಳಕಿಗೆ ಬಂದಿದೆ.
ಈ ಹಿಂದೆಯೂ ಸಾಧು ಕಾರಿನಿಂದ ಸಣ್ಣ ಪುಟ್ಟ ವಸ್ತುಗಳು ನಾಪತ್ತೆಯಾಗಿತ್ತು. ಆದರೆ ಆಗ ಸಾಧು ಅದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರಿಗೆ ದೂರು ಸಲ್ಲಿಸಿರಲಿಲ್ಲ. ಏಪ್ರಿಲ್ 24 ರಂದು ಕಳ್ಳತನ ನಡೆದಿತ್ತು. ಇನ್ಸ್ ಪೆಕ್ಟರ್ ವಿರೇಂದ್ರ ಪ್ರಸಾದ್ ತಂಡ ಆರೋಪಿಯನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ