ಮಾಸ್ ಲೀಡರ್ ನ ಸ್ಪೆಷಲ್ ಸಾಂಗ್ ಗೆ ಶರ್ಮಿಳಾ ಸ್ಟೆಪ್ಸ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಸಿನಿಮಾದ ವಿಶೇಷ ಹಾಡಿಗೆ ಶರ್ಮಿಳಾ ಮಾಂಡ್ರೆ ಸ್ಟೆಪ್ ..
ಶರ್ಮಿಳಾ ಮಾಂಡ್ರೆ
ಶರ್ಮಿಳಾ ಮಾಂಡ್ರೆ
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಸಿನಿಮಾದ ವಿಶೇಷ ಹಾಡಿಗೆ ಶರ್ಮಿಳಾ ಮಾಂಡ್ರೆ ಸ್ಟೆಪ್ ಹಾಕಲಿದ್ದಾರೆ.
ಈ ಹಾಡಿಗಾಗಿ ಸಿನಿಮಾ ನಿರ್ಮಾಪಕರು ಬಿಪಾಶಾ ಬಸು ಅಥವಾ ರಾಗಿಣಿ ದ್ವಿವೇದಿಯನ್ನು ಕರೆತರಲು ಪ್ರಯತ್ನಿಸಿದ್ದರು.
ಮುಮ್ತಾಜ್ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದ ಶರ್ಮಿಳಾ ಆನಂತರ ಬಾಲಿವುಡ್ ನ ಕಥಾ ದಲ್ಲಿ ಅಭಿನಯಿಸಿದ್ದರು. ಕೆ.ಎಂ ಚೈತನ್ಯ ನಿರ್ದೇಶನದ ಆಕೆ ಸಿನಿಮಾದಲ್ಲಿ ಶರ್ಮಿಳಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಮಾಸ್ ಲೀಡರ್ ಸಾಂಗ್ ರಾಮನಗರದ ರೆಸಾರ್ಟ್ ವೊಂದರಲ್ಲಿ ಚಿತ್ರೀಕರಣವಾಗಲಿದ್ದು, ಮುಂದಿನ ಮೂರು ದಿನಗಳಲ್ಲಿ ಶೂಟಿಂಗ್ ಮುಗಿಯಲಿದೆ. ಶೋಲೆ ಸಿನಿಮಾದ ಬಸಂತಿ ಹಾಡಿನಿಂದ ಪ್ರಸಿದ್ಧವಾಗಿರುವ ಸ್ಥಳದಲ್ಲಿ ಶಿವರಾದ್ ಕುಮಾರ್ , ಶರ್ಮಿಳಾ ಮಾಂಡ್ರೆ ಮತ್ತು ವಿಜಯ್ ರಾಘವೇಂದ್ರ, ಯೋಗಿ, ಗುರು ಜಗ್ಗೇಶ್ ಸೇರಿದಂತೆ ಹಲವರು ಡ್ಯಾನ್ಸ್ ಮಾಡಲಿದ್ದಾರೆ
ಈ ರೆಸಾರ್ಟ್ ನಲ್ಲಿ ಬಹಳ ದೊಡ್ಡ ಸೆಟ್ ಹಾಕಲಾಗಿದೆ, ಅರೇಬಿಯನ್ ಥೀಮ್ ನ ಈ ಸೆಟ್ ಗೆ ಸುಮಾರು 50 ಲಕ್ಷ ರು ಖರ್ಚಾಗಲಿದೆಯಂತೆ.
ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ನಿರ್ಮಾಣದ ಈ ಸಿನಿಮಾವನ್ನು ನರಸಿಂಹ ನಿರ್ದೇಶಿಸುತ್ತಿದ್ದಾರೆ. ಪ್ರಣಿತಾ ಸುಭಾಷ್. ಅಶಿಕಾ ರಂಗನಾಥ್ ಮತ್ತು ಕೃಷ್ಣಮ್ ವಂಶಿ ನಟಿಸಿದ್ದಾರೆ, ವೀರ್ ಸಮರ್ಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com