ಮಹಿಳೆಯರ ಕುರಿತು ಅಶ್ಲೀಲ ಹೇಳಿಕೆ; ಹಿರಿಯ ನಟ ಚಲಪತಿ ರಾವ್ ವಿರುದ್ಧ ಪ್ರಕರಣ ದಾಖಲು

ಮಹಿಳೆಯರ ಕುರಿತು ಅಶ್ಲೀಲ ಹೇಳಿಕೆ ನೀಡಿದ ಆರೋಪದಡಿ ತೆಲುಗು ಚಿತ್ರರಂಗದ ಹಿರಿಯ ನಟ ಚಲಪತಿ ರಾವ್ ಅವರ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ...
ತೆಲುಗು ಚಿತ್ರರಂಗದ ಹಿರಿಯ ನಟ ಚಲಪತಿ ರಾವ್
ತೆಲುಗು ಚಿತ್ರರಂಗದ ಹಿರಿಯ ನಟ ಚಲಪತಿ ರಾವ್
ನವದೆಹಲಿ: ಮಹಿಳೆಯರ ಕುರಿತು ಅಶ್ಲೀಲ ಹೇಳಿಕೆ ನೀಡಿದ ಆರೋಪದಡಿ ತೆಲುಗು ಚಿತ್ರರಂಗದ ಹಿರಿಯ ನಟ ಚಲಪತಿ ರಾವ್ ಅವರ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ. 
ಮಹಿಳೆಯರ ಕುರಿತಂತೆ ಹಿರಿಯ ನಟ ನೀಡಿದ್ದ ಹೇಳಿಕೆ ಹಲವು ಟೀಕೆ ಹಾಗೂ ವಿರೋಧಗಳಿಗೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಸರೂರ್ ನಗರ ಪೊಲೀಸ್ ಠಾಣೆಯಲ್ಲಿ ಚಲಪತಿ ರಾವ್ ಅವರ ವಿರುದ್ಧ ಐಪಿಸಿ ಸೆಕ್ಷನ್ 354ಎ, 509 ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. 
ನಟ ನಾಗಾರ್ಜುನ ಅವರ ಪುತ್ರ ಅಕ್ಕಿನೇನಿ ನಾಗಚೈತನ್ಯ ನಾಯಕ ನಟನಾಗಿ ಅಭಿನಯಿಸಿರುವ "ರಾರಂಡೋಯ್ ವೇಡುಕ ಚೂದ್ದಾಂ" ತೆಲುಗು ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವನ್ನು ಹೈದರಾಬಾದ್ ನಲ್ಲಿ ಆಯೋಜಿಸಲಾಗಿತ್ತು. ಚಿತ್ರದ ಟ್ರೇಲರ್ ನಲ್ಲಿ ಹುಡುಗಿಯರು ಮನಃಶಾಂತಿಗೆ ಹಾನಿಕರ ಎಂಬ ಶೀರ್ಷಿಕೆಯನ್ನು ನೀಡಲಾಗಿತ್ತು. ಸಮಾರಂಭದಲ್ಲಿ ನಿರಾಪಕಿಯೊಬ್ಬರು ಹಿರಿಯ ನಟ ಚಲಪತಿಯವರಿಗೆ ಪ್ರಶ್ನೆಯೊಂದನ್ನು ಕೇಳಿದರು. 
ನಿಜವಾಗಿಯೂ ಹುಡುಗಿಯರು ಮನಃಶಾತಿಗೆ ಹಾನಿಕಾರಕವೇ ? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಚಲಪತಿಯವರು, ಹುಡುಗಿಯರು ಆರೋಗ್ಯಕ್ಕೆ ಹಾನಿಕಾರಕವೋ ಅಲ್ಲವೋ ಗೊತ್ತಿಲ್ಲ. ಆದರೆ, ಅವರು ಹಾಸಿಗೆಯಲ್ಲಿ ಬಹಳ ಉಪಯುಕ್ತ ಎಂದು ಹೇಳಿದ್ದರು. ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. 
ಚಲಪತಿಯವರು ಈ ಹೇಳಿಕೆಗೆ ಮಹಿಳಾ ಸಂಘಟನೆಗಳಲ್ಲದೆ. ಚಿತ್ರರಂಗದ ವತಿಯಿಂದಲೂ ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿದೆ. 
ಚಲಪತಿಯವರ ಹೇಳಿಕೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ನಾಗರ್ಜುನ ಅವರು, ಮಹಿಳೆಯರ ಬಗ್ಗೆ ನನಗೆ ಅಪಾರ ಗೌರವವಿದೆ. ಚಲಪತಿ ರಾವ್ ಅವರ ಹೇಳಿಕೆಗೆ ನನ್ನ ವಿರೋಧವಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com