ಅಭಿಮಾನಿಗಳಿಗೆ ಸೂಪರ್ ಸ್ಟಾರ್ ರಜನಿಕಾಂತ್ ಖಡಕ್ ವಾರ್ನಿಂಗ್!

ತಮ್ಮ ಅಭಿಮಾನಿ ಸಂಘಟನೆಯ ಯಾವುದೇ ಸದಸ್ಯರು ಅಶಿಸ್ತಿನ ವರ್ತನೆ ತೋರಿದರೆ ಅವರನ್ನು ವಜಾ ಮಾಡಲಾಗುವುದು ಎಂದು ನಟ ರಜನೀಕಾಂತ್‌ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ತಮ್ಮ ಅಭಿಮಾನಿ ಸಂಘಟನೆಯ ಯಾವುದೇ ಸದಸ್ಯರು ಅಶಿಸ್ತಿನ ವರ್ತನೆ ತೋರಿದರೆ ಅವರನ್ನು ವಜಾ ಮಾಡಲಾಗುವುದು ಎಂದು ನಟ ರಜನೀಕಾಂತ್‌ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಕುರಿತಂತೆ ಮಾತನಾಡಿದ್ದರು. ತಮಿಳುನಾಡಿನಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿ ಹಲವು ಸಂಘಟನೆಯ ಕಾರ್ಯಕರ್ತರ  ರಜನಿಕಾಂತ್ ರಾಜಕೀಯಕ್ಕೆ ಬರಬಾರದು ಎಂದು ಪ್ರತಿಭಟನೆ ನಡೆಸಿದ್ದರು. ಇದನ್ನು ವಿರೋಧಿಸಿ ಕೆಲ ರಜನಿಕಾಂತ್ ಅಭಿಮಾನಿಗಳು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್  ರಜನಿಕಾಂತ್ ತಮ್ಮ ಅಭಿಮಾನಿಗಳ ವಿರುದ್ಧ ಅಸಮಾಧಾನಗೊಂಡಿದ್ದು, ತಮ್ಮ ಅಭಿಮಾನಿಗಳಿಗೆ ಎಲ್ಲೆ ಮೀರಿ ವರ್ತಿಸದಂತೆ ರಜನಿಕಾಂತ್ ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ "ಅಖಿಲ ಭಾರತ ರಜನೀಕಾಂತ್‌ ಅಭಿಮಾನಿಗಳ ಕಲ್ಯಾಣ ಸಂಘದ ಯಾವುದೇ ಸದಸ್ಯರು ಅಶಿಸ್ತಿನ ವರ್ತನೆ ತೋರಿ ಸಂಘದ ಘನತೆಗೆ ಕುಂದು ತಂದರೆ ಈ ಸಂಘದ ಸದಸ್ಯತ್ವದಿಂದ ಅಂಥವರನ್ನು ವಜಾಗೊಳಿಸುವ  ಅಧಿಕಾರವನ್ನು ಸಂಘದ ಹಿರಿಯ ಕಾರ್ಯಕರ್ತ ವಿ.ಎಂ. ಸುಧಾಕರ್‌ ಅವರಿಗೆ ನೀಡಿದ್ದೇನೆ' ಎಂದು ರಜನೀಕಾಂತ್‌ ತಿಳಿಸಿದ್ದಾರೆ.

ಸ್ವಂತ ಪಕ್ಷಕಟ್ಟಿ, ಇತರರ ಪಕ್ಷ ಸೇರ್ಪಡೆ ಬೇಡ: ರಜನೀಗೆ ಶತ್ರುಘ್ನ ಸಿನ್ಹಾ ಸಲಹೆ
ರಜನಿಕಾಂತ್ ರಾಜಕೀಯ ಸೇರ್ಪಡೆ ವಿಚಾರ ದಟ್ಟವಾಗಿರುವಂತೆಯೇ ಅವರನ್ನು ಪಕ್ಷಕ್ಕೆ ಸೆಳೆಯಲು ಹಲವು ರಾಜಕೀಯ ಪಕ್ಷಗಳು ಮುಂದಾಗಿದೆ. ಇದೇ ಕಾರಣಕ್ಕೆ ತಮ್ಮ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟ ಹಾಗೂ ಬಿಜೆಪಿ  ನಾಯಕ ಶುತ್ರುಘ್ನ ಸಿನ್ಹಾ ಅವರು, "ನೀವು ಯಾವುದೇ ಪಕ್ಷವನ್ನು ಸೇರಬೇಡಿ, ನಿಮ್ಮದೇ ಪಕ್ಷ ಸ್ಥಾಪಿಸಿ ಎಂದು ಸಲಹೆ ನೀಡಿದ್ದಾರೆ.ಯಾವುದೋ ರಾಜಕೀಯ ಪಕ್ಷ ಸೇರುವ ಬದಲಿಗೆ ಇತರರನ್ನು ತಮ್ಮತ್ತ ಸೆಳೆದುಕೊಳ್ಳುವಂತೆ  ಮಾಡಿಕೊಳ್ಳಿ. ನಿಮ್ಮದೇ ಪಕ್ಷ ಸ್ಥಾಪಿಸಿಠ ಎಂದು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com