ನವದೆಹಲಿ: ಹಲವು ವಿವಾದಗಳಿಂದ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡಿರುವ ಪದ್ಮಾವತಿ ಸಿನಿಮಾ ನಿರ್ದೇಶಕ ಸಂಜಯ್ ಲೀಲ್ ಬನ್ಸಾಲಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಪದ್ಮಾವತಿ ಸಿನಿಮಾ ರಿಲೀಸ್ ಮಾಡದಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಪದ್ಮಾವತಿ ಸಿನಿಮಾದಲ್ಲಿ ರಜಪೂತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವಂತ ಅಂಶಗಳಿವೆ, ಹೀಗಾಗಿ ಸಿನಿಮಾ ಬಿಡುಗಡೆ ರದ್ದುಗೊಳಿಸಲುವಂತೆ ಗುಂಪೊಂದು ಅರ್ಜಿ ಸಲ್ಲಿಸಿತ್ತು.
ಸೆನ್ಸಾರ್ ಬೋರ್ಡ್ ಇದುವರೆಗೂ ಪದ್ಮಾವತಿ ಚಿತ್ರಕ್ಕೆ ಪ್ರಮಾಣಪತ್ರ ನೀಡಿಲ್ಲ, ಸೆನ್ಸಾರ್ ಬೋರ್ಡ್ ಒಂದು ಸ್ವತಂತ್ರ್ಯ ಸಂಸ್ಥೆ, ಸುಪ್ರೀಂಕೋರ್ಟ್ ಅದರ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಡಿಸೆಂಬರ್ 1 ರಂದು ಬಿಡುಗಡೆಗೆ ಸಿದ್ಧವಾಗಿರುವ ಪದ್ಮಾವತಿ ಸಿನಿಮಾಗೆ ಹಲವು ವಿರೋಧಗಳು ವ್ಯಕ್ತವಾಗಿವೆ. ಸಿನಿಮಾ ಪ್ರದರ್ಶನ ಮಾಡದಂತೆ ಹಲವು ಮಂದಿ ಪ್ರತಿಭಟನೆ ಕೂಡ ನಡೆಸಿದ್ದಾರೆ.