ಅಮ್ಮಾ ಐ ಲವ್ ಯೂ: ಚಿರಂಜೀವಿ ಸರ್ಜಾಗೆ ನಿಶ್ವಿಕಾ ನಾಯಕಿ

ಯೋಗಿ ದ್ವಾರಕೀಶ್ ನಿರ್ಮಿಸಿ ಚೈತನ್ಯ ನಿರ್ದೇಶಿಸುತ್ತಿರುವ ಅಮ್ಮಾ ಐ ಲವ್ ಯೂ ಸಿನಿಮಾದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು..
ನಿಶ್ವಿಕಾ ನಾಯ್ಡು
ನಿಶ್ವಿಕಾ ನಾಯ್ಡು
ಬೆಂಗಳೂರು: ಯೋಗಿ ದ್ವಾರಕೀಶ್ ನಿರ್ಮಿಸಿ ಚೈತನ್ಯ ನಿರ್ದೇಶಿಸುತ್ತಿರುವ ಅಮ್ಮಾ ಐ ಲವ್ ಯೂ ಸಿನಿಮಾದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸುತ್ತಿದ್ದಾರೆ. 
ಅಮ್ಮಾ ಐ ಲವ್ ಯೂ ಗಾಗಿ ನಡೆದ ಆಡಿಶನ್ ನಲ್ಲಿ ಹಲವು ನಾಯಕಿಯರು ಪಾಲ್ಗೊಂಡಿದ್ದರು, ಅವರ ಪೈರಿ ಮಾಡೆಲ್ ನಿಶ್ವಿಕಾ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ನಿಶ್ವಿಕಾ  ವಾಸು ನಾನು ಪಕ್ಕಾ ಕಮರ್ಷಿಯಲ್ ಸಿನಿಮಾದಲ್ಲಿ ಅನೀಶ್ ತೇಜೇಶ್ವರ್ ಜೊತೆ ನಟಿಸುತ್ತಿದ್ದಾರೆ.
ಹೊಸ ಪ್ರತಿಭೆಗಳಿಗೆ ದ್ವಾರಕೀಶ್ ಪಿಕ್ಚರ್ಸ್ ಯಾವಾಗಲೂ ಪ್ರೋತ್ಸಾಹಿಸುತ್ತದೆ, ಇದನ್ನು ನಾನು ನನ್ನ ತಂದೆಯಿಂದ ಕಲಿತಿದ್ದೇನೆ,  ನಾವು ಹಲವು ಯುವತಿಯರ ಆಡಿಷನ್ ನಡೆಸಿದೆವು, ಆದರೆ ಅವರ ದಿನಾಂಕ ಹೊಂದಾಣಿಕೆ ಮತ್ತು ಮತ್ತಿತರ ವಿಷಯಗಳನ್ನು ಪರಿಗಣಿಸಿ ನಿಶ್ವಿಕಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದೇವೆ ಎಂದು ಯೋಗಿ ದ್ವಾರಕೀಶ್ ಹೇಳಿದ್ದಾರೆ.
ಚಿರಂಜೀವಿ ಸರ್ಜಾ ಈಗಾಗಲೇ ಜನಪ್ರಿಯ ನಾಯಕನಾಗಿದ್ದು, ಹೊಸ ನಾಯಕಿಗೆ ಅವಕಾಶ ನೀಡಲಾಗಿದೆ, ನಿಶ್ವಿಕಾಗೆ ಈ ಸಿನಿಮಾದಿಂದ ಉತ್ತಮ ಬ್ರೇಕ್ ಸಿಗಲಿದೆ ಎಂದು ಹೇಳಿದ್ದಾರೆ.
ಸಿತಾರಾ ಚಿರಂಜೀವಿ ತಾಯಿಯಾಗಿ ನಟಿಸಲಿದ್ದಾರೆ. ತಮಿಳಿನ ಪಿಚ್ಚಕಾರೈಯನ್ ಸಿನಿಮಾದಿಂದ ಪ್ರೇರೇಪಿತಗೊಂಡು ಈ ಸಿನಿಮಾ ತಯಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ನವೆಂಬರ್ 15 ರಿಂದ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com