'ಪೊಗರು' ನಾಯಕಿಯರಾಗಿ ರಶ್ಮಿಕಾ, ಶಾನ್ವಿ ಆಯ್ಕೆ ಆದರೆ ಒಳ್ಳೇದು: ನಂದ ಕಿಶೋರ್

ಧ್ರುವ ಸರ್ಜ ಅಭಿನಯದ 'ಭರ್ಜರಿ' 75 ದಿನಗಳನ್ನು ಪೂರ್ಣಗೊಳಿಸಲು ಸಿದ್ದವಾಗಿರುವಾಗಲೇ ಅವರ ಮುಂದಿನ ಚಿತ್ರ 'ಪೋಗರು' ಚಿತ್ರದ ತಯಾರಿಯಲ್ಲಿ ತೊಡಗಿದ್ದಾರೆ
ರಶ್ಮಿಕಾ ಮತ್ತು ಶಾನ್ವಿ
ರಶ್ಮಿಕಾ ಮತ್ತು ಶಾನ್ವಿ
Updated on
ಬೆಂಗಳೂರು: ಧ್ರುವ ಸರ್ಜ ಅಭಿನಯದ 'ಭರ್ಜರಿ' 75 ದಿನಗಳನ್ನು ಪೂರ್ಣಗೊಳಿಸಲು ಸಿದ್ದವಾಗಿರುವಾಗಲೇ ಅವರ  ಮುಂದಿನ ಚಿತ್ರ 'ಪೋಗರು' ಚಿತ್ರದ ತಯಾರಿಯಲ್ಲಿ ತೊಡಗಿದ್ದಾರೆ 'ಪೊಗರು' ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು ಗಂಗಾಧರ್ ಚಿತ್ರ ನಿರ್ಮಾಪಕರಾಗಿದ್ದಾರೆ. ಚಿತ್ರೀಕರಣ ಪ್ರಾರಂಬದಿಂದಲೂ ನಾಯಕಿಯರ ಆಯ್ಕೆ ಬಗೆಗೆ ಗೊಂದಲವಿತ್ತು. 
ಆದರೆ ಈಗ ಎಕ್ಸ್ ಪ್ರೆಸ್ ಜತೆಗೆ ಮಾತನಾಡಿದ ನಂದ ಕಿಶೋರ್, "ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ ರಶ್ಮಿಕಾ ಮಂದಣ್ಣ ಮತ್ತು ಶಾನ್ವಿ ಶ್ರೀವಾಸ್ತವ ಅವರು ಈ ಪಾತ್ರಗಳಿಗೆ ಸೂಕ್ತವಾಗಲಿದ್ದಾರೆ ಎಂದು ಚಿತ್ರತಂಡದ ಅಭಿಪ್ರಾಯವಾಗಿದೆ. ಈ ವಿಚಾರವನ್ನು ನಾನು ಅವರೊಡನೆ ಮಾತನಾಡಲಿದ್ದೇನೆ. ನಾನು, ದ್ರುವ ಹಾಗೂ ಗಂಗಾಧರ್ ಈ ಚಿತ್ರಕ್ಕಾಗಿ ಸತತ ಕೆಲಸ  ಮಾಡುತ್ತಿದ್ದೇವೆ" ಎಂದರು.
"ಈಗ ನಾನು ಈ ಕಥೆಯನ್ನು ಎರಡು ನಾಯಕಿಯರಿಗೆ ಹೇಳಬೇಕಿದೆ ಆಬಳಿಕ ಅವರ ಒಪ್ಪಿಗೆ ಪಡೆಯಬೇಕು. ಇದು ಶೀಘ್ರದಲ್ಲೇ ಆಗಲಿದೆ. ಇದಾದ ನಂತರ ನಾನು ಚಿತ್ರದ ನಾಯಕಿಯರಾರು ಎನ್ನುವುದನ್ನು ಅಧಿಕೃತವಾಗಿ ಗೊಷಿಸಲಿದ್ದೇನೆ. ಚಿತ್ರೀಕರಣ ಪ್ರಾರಂಬವಾಗುವ ಮುನ್ನ ನಾವು ಈ ವಿಚಾರವನ್ನು ಬಹಿರಂಗಪಡಿಸುತ್ತೇವೆ" ಎಂದು ನಂದ ಕಿಶೋರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com