ಕನ್ನಡದಲ್ಲಿ ಬಹುತಾರಾಗಣ ಮತ್ತು ದೊಡ್ಡ ಬಜೆಟ್ ನೊಂದಿಗೆ ತಯಾರಾಗುತ್ತಿರುವ ಕುರುಕ್ಷೇತ್ರ ಚಿತ್ರಕ್ಕೆ ವಿ.ಹರಿಕೃಷ್ಣ ಅವರ ಸಂಗೀತವಿದೆ. ಹಿರಿಯ ನಟರಾದ ಅಂಬರೀಷ್, ಅರ್ಜುನ್ ಸರ್ಜಾ, ಭಾರತಿ ವಿಷ್ಣುವರ್ಧನ್, ರವಿ ಶಂಕರ್, ಶ್ರೀನಾಥ್, ಸಾಯಿಕುಮಾರ್ ಸೇರಿದಂತೆ ನಟ ನಟಿಯರಾದ ಸ್ನೇಹಾ, ನಿಖಿಲ್ ಕುಮಾರ್, ಹರಿಪ್ರಿಯಾ ಅಭಿನಯಿಸಿದ್ದಾರೆ.