ಇನ್ನು ಉಪೇಂದ್ರ ಅವರ ಈ ಮಹಿಳಾ ಪಾತ್ರದ ಕುರಿತು ಚಿತ್ರ ತಂಡ ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲ. ಉಪೇಂದ್ರ ಅವರ ಈ ಪಾತ್ರ ಕುತೂಹಲಕಾರಿಯಾಗಿದ್ದು, ಪ್ರೇಕ್ಷಕರು ಥಿಯೇಟರ್ ನಲ್ಲಿಯೇ ಆ ಕುತೂಹಲವನ್ನು ತಣಿಸಿಕೊಳ್ಳಲಿ ಎಂಬುದು ಚಿತ್ರತಂಡದ ಭಾವನೆಯಾಗಿದೆ. ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ ಶ್ರೀಕಾಂತ್ ಅವರು ಈ ಬಗ್ಗೆ ಮಾತನಾಡಿ, ಉಪೇಂದ್ರ ಅವರು ಮೊದಲ ಬಾರಿಗೆ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ಪಾತ್ರ ತುಂಬಾ ಕುತೂಹಲಕಾರಿಯಾಗಿದ್ದು, ಇದರ ಬಗ್ಗೆ ನಾನು ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಸಿನಿಮಾ ನೋಡಿದಾಗ ಪಾತ್ರದ ಪ್ರಾಮುಖ್ಯತೆ ತಿಳಿಯುತ್ತದೆ ಎಂದು ಹೇಳಿದ್ದಾರೆ.