ಇಂಡೀಗೋ ವಿಮಾನ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕ್ಷಮೆ ಕೋರಿದ ಗಾಯಕ ಆದಿತ್ಯ ನಾರಾಯಣ್

ನಟ, ಗಾಯಕ ಆದಿತ್ಯನಾರಾಯಣ್ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಇಂಡಿಗೋ ವಿಮಾನ ಸಂಸ್ಥೆ ಹೇಳಿದೆ.
ಆದಿತ್ಯ ನಾರಾಯಣ್
ಆದಿತ್ಯ ನಾರಾಯಣ್
ಮುಂಬೈ: ನಟ, ಗಾಯಕ ಆದಿತ್ಯನಾರಾಯಣ್ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಇಂಡಿಗೋ ವಿಮಾನ ಸಂಸ್ಥೆ ಹೇಳಿದೆ. 
ಅ.02 ರಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ಆದಿತ್ಯ ನಾರಾಯಣ್ ಇಂಡಿಗೋ ವಿಮಾನ 6E-258 ದಲ್ಲಿ ರಾಯ್ ಪುರ-ಮುಂಬೈಗೆ ತೆರಳಬೇಕಿದ್ದ ವೇಳೆ ಅವಾಚ್ಯ ಶಬ್ದಗಳಿಂದ ಮಹಿಳಾ ಸಿಬ್ಬಂದಿಯನ್ನು ನಿಂದಿಸಿದ್ದಾರೆ, ಇದು ವಿಡಿಯೋದಲ್ಲಿ ಕೂಡ ದಾಖಲಾಗಿದೆ. 
ಹೆಚ್ಚಿನ ಲಗೇಜ್ ನ್ನು ಕೊಂಡೊಯ್ದಿದ್ದಕ್ಕಾಗಿ 13,000 ರೂ. ಪಾವತಿ ಮಾಡುವಂತೆ ಸಿಬ್ಬಂದಿಗಳು ಸೂಚಿಸಿದ್ದಾರೆ. ಇದಕ್ಕೆ ಆದಿತ್ಯನಾರಾಯಣ್ ನಿರಾಕರಿಸಿದ್ದರಿಂದ ಸಿಬ್ಬಂದಿಗಳು ಹಾಗೂ ಆದಿತ್ಯನಾರಾಯಣ್ ನಡುವೆ ವಾಗ್ವಾದ ಉಂಟಾಗಿದೆ ಈ ವೇಳೆ ಅವಾಚ್ಯ ಶಬ್ದಗಳಿಂದ ಮಹಿಳಾ ಸಿಬ್ಬಂದಿಯನ್ನು ನಿಂದಿಸಿದ್ದಾರೆ, ನಂತರ ತಮ್ಮ ವರ್ತನೆ ಹೀಗೇ ಮುಂದುವರೆದಲ್ಲಿ ಪ್ರಯಾಣವನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದ ನಂತರ ಆದಿತ್ಯನಾರಾಯಣ್ ಕ್ಷಮೆ ಕೋರಿದ್ದಾರೆ ಎಂದು ಇಂಡಿಗೋ ವಿಮಾನ ಸಂಸ್ಥೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com