ಕವಲುದಾರಿ ಮೂಲಕ ಅದೃಷ್ಟ ಪರೀಕ್ಷೆಗಿಳಿದ ಆರ್ ಜೆ ಸಮನ್ವಿತಾ ಶೆಟ್ಟಿ, ಸಿರಿ ರವಿಕುಮಾರ್

ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಹೇಮಂತ್ ಕುಮಾರ್ ನಿರ್ದೇಶನದ ಕವಲು ದಾರಿ ಸಿನಿಮಾಗೆ ಕಲಾವಿದರ ಆಯ್ಕೆ...
ಸಿರಿ ರವಿಕುಮಾರ್ ಮತ್ತು ಸಮನ್ವಿತಾ ಶೆಟ್ಟಿ
ಸಿರಿ ರವಿಕುಮಾರ್ ಮತ್ತು ಸಮನ್ವಿತಾ ಶೆಟ್ಟಿ
Updated on
ಬೆಂಗಳೂರು: ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಹೇಮಂತ್ ಕುಮಾರ್ ನಿರ್ದೇಶನದ ಕವಲು ದಾರಿ ಸಿನಿಮಾಗೆ ಕಲಾವಿದರ ಆಯ್ಕೆ ಅಂತಿಮವಾಗಿದೆ. 
ಸಮನ್ವಿತಾ ಶೆಟ್ಟಿ, ಹಾಗೂ ಸಿರಿ ರವಿಕುಮಾರ್ ಎಂಬ ಇಬ್ಬರು ಹೊಸ ಪ್ರತಿಭೆಗಳು ಕವಲು ದಾರಿ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ರಂಗಭೂಮಿ ಕಲಾವಿದೆಯಾಗಿರುವ ಸಮನ್ವಿತಾ ಶೆಟ್ಟಿ ರೇಡಿಯೋ ಜಾಕಿ ಆಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಸಿದ್ದಾರ್ಥ ನ ಪತ್ನಿ ಪಾತ್ರದಲ್ಲಿ ಸಮನ್ವಿತಾ ನಟಿಸುತ್ತಿದ್ದಾರೆ.  ಸಿರಿ ಅನಂತ್ ಪತ್ನಿಯ ಪಾತ್ರ ನಿರ್ವಹಿಸಲಿದ್ದಾರೆ. ಇಬ್ಬರನ್ನು ಆಡಿಷನ್ ಮೂಲಕ ಆಯ್ಕೆ ಮಾಡಲಾಗಿದೆ ಎಂದು ನಿರ್ದೇಶಕ ಹೇಮಂತ್ ಹೇಳಿದ್ದಾರೆ.ಅಕ್ಟೋಬರ್ 9 ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com