ಮೊದಲ ಬಾರಿಗೆ ಅನುಷ್ಕಾ ಜೊತೆಗಿನ ಸಂಬಂಧದ ಬಗ್ಗೆ ಬಾಯ್ಬಿಟ್ಟ ವಿರಾಟ್!

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ ವಿರಾಟ್ ....
ಕೊಹ್ಲಿ- ಅನುಷ್ಕಾ ಶರ್ಮಾ
ಕೊಹ್ಲಿ- ಅನುಷ್ಕಾ ಶರ್ಮಾ
ಮುಂಬೈ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ ವಿರಾಟ್ ಕೊಹ್ಲಿ ಇತ್ತೀಚೆಗೆ ತಮ್ಮಿಬ್ಬರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
ಇಬ್ಬರು ಸೆಲಬ್ರಿಟಿಗಳು ತಮ್ಮ ನಡುವಿನ ಲವ್ ಅಪೈರ್ ಬಗ್ಗೆ ಎಲ್ಲಿಯೂ ಮಾತನಾಡದೇ ತುಟಿ ಬಿಚ್ಚದೇ ಖಾಸಗಿ ಬದುಕಿನ ವಿವರಗಳನ್ನು ಖಾಸಗಿಯಾಗೇ ಇಟ್ಟಿದ್ದಾರೆ. 
ಆದರೆ ಇತ್ತೀಚೆಗೆ ನಟ ಅಮೀರ್ ಖಾನ್ ಜೊತೆಗಿನ ಟಿವಿ ಕಾರ್ಯಕ್ರಮವೊಂದರಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ತಮ್ಮ ಮನಸ್ಸಿನಲ್ಲಿದ್ದನ್ನು ಬಹಿರಂಗ ಪಡಿಸಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಪ್ರಸಾರವಾಗಲಿರುವ ಖಾಸಗಿ ವಾಹಿನಿಯ ಟಾಕ್ ಶೋ ಒಂದರಲ್ಲಿ ಅಮೀರ್ ಖಾನ್, ಕೊಹ್ಲಿ ಸಂದರ್ಶನ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮೀರ್ ಕೊಹ್ಲಿ ಬಳಿ ಅನುಷ್ಕಾ ಬಗ್ಗೆ ಪ್ರಶ್ನೆ ಕೇಳಿದ್ದಾರೆ ಇದಕ್ಕೆ ಕೊಹ್ಲಿ ಉತ್ತರ ಸಹ ನೀಡಿದ್ದಾರೆ. 
ನಾನು ಆಕೆಯ ಪ್ರಾಮಾಣಿಕತೆ ಮತ್ತು ಕೇರ್ ನೆಸ್ ಅನ್ನು ಪ್ರೀತಿಸುತ್ತೇನೆ, ಆದೆರ ಆಕೆಯಲ್ಲಿ ಇಷ್ಟಪಡದ ಒಂದು ಸಂಗತಿಯಿದೆ ಅದೇನೆಂದರೆ ಅಕೆ ಯಾವಾಗಲೂ 5ರಿಂದ 7 ನಿಮಿಷ ತಡವಾಗಿ ಬರುತ್ತಾಳೆ,  ಆಕೆ ನನ್ನ ಜೊತೆ ಯಾವಾಗಲೂ ಇರುತ್ತಾಳೆ, ನಮ್ಮಿಬ್ಬರ ನಡುವೆ ದೊಡ್ಡ ಅಂಡರ್ ಸ್ಟಾಂಡಿಂಗ್ ಇದೆ, ಕಳೆದ 3-4 ವರ್ಷಗಳಲ್ಲಿ ನನ್ನನ್ನು ಬಹಳಷ್ಟು ಸುಧಾರಿಸಿದ್ದಾಳೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com