ಮುಂದಿನ ಶೆಡ್ಯೂಲ್ ನಲ್ಲಿ ಧನಂಜಯ್ ಮತ್ತು ವಿಶಿಷ್ಠ ಸಿಂಹ ಅವರ ಕಾಂಬಿನೇಷನ್ ನಲ್ಲಿರುವ ಸನ್ನಿವೇಶದ ಶೂಟಿಂಗ್ ನಡೆಯಲಿದೆ. ಶಿವಣ್ಣ ಮತ್ತು ಮಾನ್ವಿತಾ ಹರೀಶ್ ಹಾಡಿನ ಶೂಟಿಂಗ್ ಗಾಗಿ ಹೊಸಪೇಟೆ ಸಮೀಪ ಅದ್ಭುತವೆನಿಸುವ ಸ್ಥಳ ಗುರುತಿಸಲಾಗಿದೆ, ಇದೊಂದು ಅದ್ಭುತ ಹಾಡಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ ಶಿವಣ್ಣ ಮತ್ತು ಮಾನ್ವಿತಾ ಲಂಬಾಣಿಗರ ಉಡುಪು ಧರಿಸಲಿದ್ದಾರೆ, ಕೊನೆಯ ಹಾಡನ್ನು ಗೋವಾದಲ್ಲಿ ಚಿತ್ರೀಕರಿಸಲಾಗುವುದು ಎಂದು ಹೇಳಿದ್ದಾರೆ.