ನಾನು ಮತ್ತು ಗುಂಡ ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಜೊತೆ ಸಂಯುಕ್ತಾ!

ಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಮತ್ತು ಸಂಯುಕ್ತಾ ಹೊರನಾಡು ಅಭಿನಯಿಸಿರುವ ನಾನು ಮತ್ತು ಗುಂಡ ಎಂಬ ಸಿನಿಮಾದಲ್ಲಿ ಲ್ಯಾಬ್ರಾಡಾರ್ ...
ಶಿವರಾಜ್ , ಸಂಯುಕ್ತಾ ಹೊರನಾಡು ಜೊತೆಗೆ ಗುಂಡ
ಶಿವರಾಜ್ , ಸಂಯುಕ್ತಾ ಹೊರನಾಡು ಜೊತೆಗೆ ಗುಂಡ
ಬೆಂಗಳೂರು : ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಿಗಳು ಅವಿಭಾಜ್ಯ ಅಂಗವಾಗಿವೆ, ರಕ್ಷಿತ್ ಶೆಟ್ಟಿ ನಿರ್ಮಾಣದ 777 ಚಾರ್ಲಿ ನಂತರ ಮತ್ತೊಂದು ನಾಯಿ ನಿಮ್ಮನ್ನು ನಗಿಸಲು ಬರುತ್ತಿದೆ. 
ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಮತ್ತು ಸಂಯುಕ್ತಾ ಹೊರನಾಡು ಅಭಿನಯಿಸಿರುವ ನಾನು ಮತ್ತು ಗುಂಡ ಎಂಬ ಸಿನಿಮಾದಲ್ಲಿ ಲ್ಯಾಬ್ರಾಡಾರ್ ನಾಯಿಯೊಂದು ನಟಿಸಿದೆ.
ಈ ಸಿನಿಮಾದಲ್ಲಿ ಶಿವರಾಜ್ ಆಟೋ ಚಾಲಕನ ಪಾತ್ರ ಮಾಡಲಿದ್ದಾರೆ. ಸಂಯುಕ್ತಾ ಹೊರನಾಡು ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ, ರಘು ಹಾಸನ್ ಮತ್ತು ಶ್ರೀನಿವಾಸ್ ತಿಮ್ಮಯ್ಯ ಸಿನಿಮಾ ನಿರ್ದೇಶಿಸಲಿದ್ದಾರೆ, ಸಕಲೇಶಪುರದಲ್ಲಿ ಎರಡನೆ ಹಂತದ ಶೂಟಿಂಗ್ ನಡೆಯುತ್ತಿದೆ.
ನಾನೊಬ್ಬ ಪ್ರಾಣಿ ಪ್ರಿಯೆ, ಹೀಗಾಗಿ ನನಗೆ ಈ ಸಿನಿಮಾ ವಿಶೇಷವಾಗಿದೆ. ಸೆಟ್ ನಲ್ಲಿ 2 ನಾಯಿಗಳಿದ್ದವು, ಒಂದು ಗುಂಡ ಮತ್ತೊಂದು ಬೇರೆ ನಾಯಿ, ಮೂರು ವರ್ಷದ ಗುಂಡನಿಗೆ ತರಬೇತಿ ನೀಡಲಾಗುತ್ತಿದೆ. ಕಥೆಯು ಗುಂಡನ ಕುರಿತದ್ದಾಗಿದೆ, ಸಿನಿಮಾದಲ್ಲಿ ನನ್ನದು ಪ್ರಾಣಿಗಳನ್ನು ದ್ವೇಷಿಸುವ ಪಾತ್ರವಾಗಿದೆ, ಆದರೆ ಗುಂಡ ನನ್ನ ಬಾಳಿಗೆ ಬಂದ ಮೇಲೆ ಎಲ್ಲವೂ ಬದಲಾಗಲಿದೆ,.ಗುಂಡ ನಾಯಿ ಪ್ರೇಕ್ಷಕರ ಮನವನ್ನು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಂಯುಕ್ತಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com