ಜಾನಿ ಜಾನಿಯಲ್ಲಿ ಅಭಿಮಾನಿಗಳಿಗೆ ದುನಿಯಾ ವಿಜಯ್ 'ಸಿಕ್ಸ್ ಪ್ಯಾಕ್' ದರ್ಶನ

ಜಾನಿ ಜಾನಿ ಯಲ್ಲಿ ಸಿಕ್ಸ್ ಪ್ಯಾಕ್ ತೋರಿಸಲು ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ. ಆರು ಬಾರಿ ಒಲಂಪಿಕ್ ಚ್ಯಾಂಪಿಯನ್ ಆಗಿರುವ ದಾವಣಗೆರೆ ಮೂಲದ ಮಂಜುನಾಥ್ ...
ದುನಿಯಾ ವಿಜಯ್
ದುನಿಯಾ ವಿಜಯ್
ಬೆಂಗಳೂರು: ನಟ ದುನಿಯಾ ವಿಜಯ್ ತಮ್ಮ ಸಿಕ್ಸ್ ಪ್ಯಾಕ್ ತೋರಿಸಲು ಯಾವಾಗಲೂ ಉತ್ಸುಕರಾಗಿರುತ್ತಾರೆ, ಸದ್ಯ ಕನಕ ಶೂಟಿಂಗ ಮುಗಿಸಿರುವ ವಿಜಯ್,  ಜಾನಿ ಜಾನಿ ಎಸ್ ಪಾಪಾ ಸಿನಿಮಾಗಾಗಿ ಸಿದ್ದತೆ ನಡೆಸುತ್ತಿದ್ದಾರೆ.
ಜಾನಿ ಜಾನಿ ಯಲ್ಲಿ ಸಿಕ್ಸ್ ಪ್ಯಾಕ್  ತೋರಿಸಲು ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ. ಆರು ಬಾರಿ ಒಲಂಪಿಕ್ ಚ್ಯಾಂಪಿಯನ್ ಆಗಿರುವ ದಾವಣಗೆರೆ ಮೂಲದ ಮಂಜುನಾಥ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ವಿಜಯ್ ಉತ್ತಮ  ಬಾಡಿ ಶೇಪ್ ಪಡೆದಿದ್ದಾರೆ. ಫೈಟ್ ಸನ್ನಿವೇಶಕ್ಕಾಗಿ  ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ, ವಿಜಯ್ ಒಪ್ಪಿಗೆ ನೀಡಿದ ತಕ್ಷಣ ಈ ತಿಂಗಳಿನಲ್ಲಿ ಯಾವಾಗ ಬೇಕಾದರೂ ಶೂಟಿಂಗ್ ಆರಂಭವಾಗಲಿದೆ ಎಂದು ನಿರ್ದೇಶಕ ಪ್ರೀತಂ ಗುಬ್ಬಿ ಹೇಳಿದ್ದಾರೆ.
ಎಲ್ಲಾ ಚಿತ್ರಗಳಲ್ಲೂ ನಿರ್ದೇಶಕರು ವಿಜಯ್ ಬಾಡಿ ತೋರಿಸಲು ಏಕೆ ಬಯಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರೀತಂ ಗುಬ್ಬಿ,  ವಿಜಯ್ ತಮ್ಮ ಬಾಜಿ ಬಿಲ್ಡಿಂಗ್ ಮಾಡಲು ತುಂಬಾ ಡೆಡಿಕೇಟ್ ಮಾಡಿದ್ದಾರೆ. ಹಾಗಾಗಿ ನಾವು ಅದನ್ನು ತೋರಿಸಲು ಬಯಸುತ್ತೇವೆ. ಕಳೆದ ಮೂರು ತಿಂಗಳಿನಿಂದ ವಿಜಯ್ ವರ್ಕ್ ಔಟ್ ಮಾಡುತ್ತಿದ್ದಾರೆ. ಸಿನಿಮಾ ಟ್ರೆಂಡಿ ಕಥೆಗೆ ಇದು ಅವಶ್ಯಕತೆಯಿದೆ. ಜೊತೆಗೆ ವಿಭಿನ್ನವಾದ ಹೇರ್ ಸ್ಟೈಲ್ ಮತ್ತು ಡಿಫರೆಂಟ್ ಕ್ಲಾಥ್ ಡಿಸೈನ್ ಮಾಡಲಾಗಿದೆ. ಯೋಗಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.
ವಿಜಯ್ ಹೋಂ ಬ್ಯಾನರ್  ದುನಿಯಾ ಟಾಕೀಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ, ಸಿನಿಮಾಗೆ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com