ಸಿನಿಮಾ ಸುದ್ದಿ

ಕುರುಕ್ಷೇತ್ರ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ದಾಖಲೆ ಬೆಲೆ ರೂ. 9 ಕೋಟಿಗೆ ಮಾರಾಟ!

ನಿರ್ಮಾಪಕ ಮುನಿರತ್ನ ಅವರ ಬಹು ನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ಇತಿಹಾಸ ಸೃಷ್ಟಿಸಲು ಮುಂದಾಗಿದೆ, ಕೇವಲ ಇನ್ನೂ ಅರ್ಧ ಮಾತ್ರ ಶೂಟಿಂಗ್ ಬಾಕಿಯಿದೆ. ...

ಕುರುಕ್ಷೇತ್ರ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ದಾಖಲೆ ಬೆಲೆ ರೂ. 9 ಕೋಟಿಗೆ ಮಾರಾಟ!
ಕುರುಕ್ಷೇತ್ರ ಸಿನಿಮಾ ಸ್ಟಿಲ್
Published On :
ಬೆಂಗಳೂರು: ನಿರ್ಮಾಪಕ ಮುನಿರತ್ನ ಅವರ ಬಹು ನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ಇತಿಹಾಸ ಸೃಷ್ಟಿಸಲು ಮುಂದಾಗಿದೆ, ಕೇವಲ ಇನ್ನೂ ಅರ್ಧ ಮಾತ್ರ ಶೂಟಿಂಗ್ ಬಾಕಿಯಿದೆ. ಹೀಗಿರುವಾಗಲೇ ಕುರುಕ್ಷೇತ್ರ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು 9 ಕೋಟಿ ರು.ಗೆ ಮಾರಾಟವಾಗಿದೆ.
ಕುರುಕ್ಷೇತ್ರ ಸಿನಿಮಾ ಹಿಂದಿ ಡಬ್ಬಿಂಗ್ ಹಕ್ಕು ಪಡೆಯಲು ಹಲವರು ಪ್ರಯತ್ನ ಪಟ್ಟರು, ಆದರೆ ಅಂತಿವಮಾಗಿ  ಆದಿತ್ಯ ಅವರಿಗೆ ಸಿಕ್ಕಿದೆ. ಜೊತೆಗೆ ಅತ್ಯಧಿಕ ಹಣಕ್ಕೆ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ. 
ಯಾವಾಗಲೂ ಹೂಡಿಕೆದಾರರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ, ಆರಂಭದಲ್ಲಿ 4 ಕೋಟಿ ರು ಗೆ ಕೋಟ್ ಮಾಡಲಾಗಿತ್ತು. ಅಂತಿಮವಾಗಿ 9 ಕೋಟಿಗೆ ಮಾರಾಟವಾಗಿದೆ.
ಕನ್ನಡದಲ್ಲಿ  ಇದೇ ಮೊದಲ ಬಾರಿಗೆ ದಾಖಲೆಯ ಬೆಲೆಗೆ ಡಬ್ಬಿಂಗ್ ಹಕ್ಕು ಮಾರಾಟವಾಗಿದೆ.
ಕುರುಕ್ಷೇತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾವಾಗಿದ್ದು,  ದುರ್ಯೋಧನನ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಸರ್ದಾ, ರವಿಚಂದ್ರನ್, ಅಂಬರೀಷ್, ಶ್ರೀನಾಥ್, ಅನಂತ್ ನಾಗ್, ಸೇರಿದಂತೆ ಹಲವು ಕಲಾವಿದರ ದೊಡ್ಡ ತಾರಾಗಣವೇ ಇದೆ. ಈ ಸಿನಿಮಾಗಾಗಿ ಸುಮಾರು 80 ಕೋಟಿ ರು ಬಂಡವಾಳ ಹೂಡಿದ್ದಾರೆ.
ಹೈದರಾಬಾದ್ ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಅದ್ದೂರಿ ಚಿತ್ರೀಕರಣ ನಡೆಯುತ್ತಿದ್ದು ಸಿನಿಮಾ ಶೂಟಿಂಗ್ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಅದರ ಲಾಭದ ಬಗ್ಗೆ ನಿರೀಕ್ಷೆ ಮಾಡಲಾಗಿದೆ ಸ್ಯಾಟಲೈಟ್, ಹಕ್ಕು ಡಬ್ಬಿಂಗ್ ಹಕ್ಕು ಸೇರಿದಂತೆ ಸಿನಿಮಾ 100 ಕೋಟಿ ಲಾಭ ಗಳಿಸಲಿದೆ ಎಂದು ಅಂದಾಜು ಮಾಡಲಾಗಿದೆ,
ತಮಿಳು, ತೆಲುಗು, ಮಲಯಾಳಂ ಭಾಷೆಗಳ ಡಬ್ಬಿಂಗ್ ಹಕ್ಕು 20 ಕೋಟಿ ರು ಗೆ ಮಾರಾಟವಾಗಿದೆ,  ಇನ್ನೂ ಸಂಗೀತ ಸೇರಿದಂತೆ ಸ್ಯಾಟ್ ಲೈಟ್ ಮಾರಾಟ ಹಕ್ಕುಗಳಿಂದ ಹಾಕಿರುವ ಬಂಡವಾಳ ವಾಪಸ್ ಬರುತ್ತದೆ ಎನ್ನಲಾಗುತ್ತಿದೆ.
ಈ ತ್ರಿಡಿ ಸಿನಿಮಾ ಕರ್ನಾಟಕದ  60 ಥಿಯೇಟರ್ ಗಳಲ್ಲಿ  ಮೊದಲ ವಾರದಲ್ಲೇ 15 ರಿಂದ 20 ಕೋಟಿ ರು. ಕಲೆಕ್ಷನ್ ಮಾಡುತ್ತದೆ, ಭಾರತಾದ್ಯಂತ ವಿತರಣಾ ಹಕ್ಕು ಸೇರಿದಂತೆ ಹಲವು ಮೂಲಗಳಿಂದ ಲಾಭ ಪಡೆಯಲಿದೆ ಎನ್ನಲಾಗುತ್ತಿದೆ.  2018ರ ಸಂಕ್ರಾಂತಿ ವೇಳೆಗೆ ಸಿನಿಮಾ ಬಿಡುಗಡೆ ಯಾಗುವ ಸಾಧ್ಯತೆಯಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.