ನಟಿ ಪವಿತ್ರಾಗೌಡ ಅವರು ಅಪ್ಲೋಡ್ ಮಾಡಿರುವ ಚಿತ್ರ
ಸಿನಿಮಾ ಸುದ್ದಿ
ನಟಿ ಪವಿತ್ರಾ ಗೌಡ ಜೊತೆ ನಟ ದರ್ಶನ್: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್!
ಸ್ಯಾಂಡಲ್'ವುಡ್ ನಟಿ ಹಾಗೂ ಮಾಡಲ್ ಪವಿತ್ರ ಗೌಡ ಅವರು ತಮ್ಮ ಫೇಸ್'ಬುಕ್ ಹಾಗೂ ಟ್ವಿಟರ್ ಅಕೌಂಟ್'ನಲ್ಲಿ ದರ್ಶನ್ ಜೊತೆಗಿರುವ ಫೋಟೊವನ್ನು ಕವರ್ ಪೇಜ್'ನಲ್ಲಿ ಹಾಕಿಕೊಂಡಿದ್ದು, ಇದೀಗ ಈ ಫೋಟೋ ವ್ಯಾಪಕ ವೈರಲ್ ಆಗಿದೆ.
ಬೆಂಗಳೂರು: ಸ್ಯಾಂಡಲ್'ವುಡ್ ನಟಿ ಹಾಗೂ ಮಾಡಲ್ ಪವಿತ್ರ ಗೌಡ ಅವರು ತಮ್ಮ ಫೇಸ್'ಬುಕ್ ಹಾಗೂ ಟ್ವಿಟರ್ ಅಕೌಂಟ್'ನಲ್ಲಿ ದರ್ಶನ್ ಜೊತೆಗಿರುವ ಫೋಟೊವನ್ನು ಕವರ್ ಪೇಜ್'ನಲ್ಲಿ ಹಾಕಿಕೊಂಡಿದ್ದು, ಇದೀಗ ಈ ಫೋಟೋ ವ್ಯಾಪಕ ವೈರಲ್ ಆಗಿದೆ.
ಫೋಟೋ ಅಪ್ಲೋಡ್ ಆಗುತ್ತಿದ್ದಂತೆಯೇ ವ್ಯಾಪಕ ಊಹಾಪೋಹಗಳು ಹರಿದಾಡುತ್ತಿದ್ದು, ದರ್ಶನ್ ಹಾಗೂ ನಟಿ ಪವಿತ್ರಾಗೌಡ ನಡುವೆ ಅಫೇರ್ ಇರುವ ಕುರಿತು ಸುದ್ದಿಗಳು ಹರಿದಾಡುತ್ತಿವೆ. ಆದರೆ ನಟಿ ಪವಿತ್ರಾಗೌಡ ಅವರ ಈ ಫೋಟೋಗೆ ನಟ ದರ್ಶನ್ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಫೋಟೊವನ್ನು ಡೆಲಿಟ್ ಮಾಡುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.
ಈ ಹಿಂದೆ ಇವರಿಬ್ಬರ ನಡುವೆ ಅಫೇರ್ ಇರುವ ಬಗ್ಗೆ ಸುದ್ದಿಯಾಗಿತ್ತು. ಆದರೆ ಇದಕ್ಕೆ ಸ್ಪಷ್ಟಿಕರಣ ನೀಡಿದ್ದ ಪವಿತ್ರ ನಾವಿಬ್ಬರು ಗೆಳಯರಷ್ಟೆ ಮತ್ತೇನಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ತಮ್ಮ ಟ್ವಿಟರ್ ಅಕೌಂಟ್'ನಲ್ಲಿ ದರ್ಶನ್ ತೋಟದಲ್ಲಿ ಹಾಲು ಕರೆಯುತ್ತಿರುವ ವಿಡಿಯೋವನ್ನು ಕೂಡ ಪೋಸ್ಟ್ ಮಾಡಿಕೊಂಡಿದ್ದಾರೆ. ಆದರೆ ಫೋಟೋ ಸುದ್ದಿ ಕುರಿತಂತೆ ನಟ ದರ್ಶನ್ ಈವರೆಗೂ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಆದರೆ ಇಂದು ಟ್ವಿಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಪವಿತ್ರಾಗೌಡ ನಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದ..ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಟ್ವೀಟ್ ಮಾಡಿದ್ದಾರೆ.
ನಟಿ ಪವಿತ್ರ ಗೌಡ ಛತ್ರಿಗಳು ಸಾರ್ ಛತ್ರಿಗಳು ಹಾಗೂ ಭತ್ತಾಸ್ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ