ದರ್ಶನ್ 51ನೇ ಚಿತ್ರಕ್ಕೆ ಪೊನ್ ಕುಮಾರ್ ನಿರ್ದೇಶನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50ನೇ ಸಿನಿಮಾ ಕುರುಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ತಾರಕ್ ಸಿನಿಮಾ ಬಿಡುಗಡೆಗಾಗಿಯೂ ಕಾಯುತ್ತಿದ್ದಾರೆ, ...
ದರ್ಶನ್
ದರ್ಶನ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್  ತಮ್ಮ 50ನೇ ಸಿನಿಮಾ ಕುರುಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ತಾರಕ್ ಸಿನಿಮಾ ಬಿಡುಗಡೆಗಾಗಿಯೂ ಕಾಯುತ್ತಿದ್ದಾರೆ, ಪ್ರಕಾಶ್ ಜಯರಾಮ್ ನಿರ್ದೇಶನದ ತಾರಕ್ ಸಿನಿಮಾ ವಿಜಯ ದಶಮಿ ಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ದರ್ಶನ್ 51ನೇ ಸಿನಿಮಾ ಕುರಿತು ಮಾತುಗಳು ಕೇಳಿ ಬರುತ್ತಿವೆ.
ಸದ್ಯ ದರ್ಶನ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ನಿರ್ಮಾಪಕರು ದರ್ಶನ್ ಕರೆಗಾಗಿ ಕಾಯುತ್ತಿದ್ದಾರೆ, ಕುರುಕ್ಷೇತ್ರ ನಂತರ, ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣದ  51ನೇ ಸಿನಿಮಾದಲ್ಲಿ ದರ್ಶನ್ ನಟಿಸಲಿದ್ದು, ಪೊನ್ ಕುಮಾರ್ ನಿರ್ದೇಶಿಸಲಿದ್ದಾರೆ.
ವಿಷ್ಣು ವರ್ಧನ, ಚಾರುಲತಾ, ಗೌಡ್ರು ಹೋಟೆಲ್ ಸಿನಿಮಾಗಳನ್ನು ಪೊನ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.
ದರ್ಶನ್ 51 ಸಿನಿಮಾದ ಕಥೆ ಏನಿರಬಹುದು ಎಂದು ಈಗಾಗಲೇ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ನಿರ್ಮಾಪಕಿ ಶೈಲಜಾ ನಾಗ್ ಮಾತ್ರ ಕಥೆಯ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿಲ್ಲ, ಇದೊಂದು ಪ್ರೀತಿ, ಸಾಹಸ ಪ್ರಧಾನಕಥೆಯುಳ್ಳ  ಸಿನಿಮಾವಾಗಿದೆ ಎಂದು ಮಾತ್ರ ತಿಳಿಸಿದ್ದಾರೆ.
ಇನ್ನೂ ಈ ಸಿನಿಮಾದಲ್ಲಿ ವಿ. ಹರಿಕೃಷ್ಣ ಸಹ ನಟಿಸುತ್ತಿದ್ದಾರೆ, ಮೊದಲನೇ ಬಾರಿ, ಚಿತ್ರಕಥೆ ಮತ್ತು ಸಂಭಾಷಣೆ ಜೊತೆಗೆ ಮಾಡುತ್ತಿರುವುದಾಗಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com