ಕ್ಯಾನ್ಸರ್ ಚಿಕಿತ್ಸೆ ಮುಗಿದಿದೆ: ನ್ಯೂಯಾರ್ಕ್ ನಿಂದ ವಾಪಸಾದ ಸೋನಾಲಿ ಬೇಂದ್ರೆ ಪತಿ ಹೇಳಿಕೆ

ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ನ್ಯೂಯಾರ್ಕ್‌ ನಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಪಡೆದು ಇದೀಗ ಮುಂಬಯಿಗೆ ಮರಳಿದ್ದಾರೆ. ಸೊನಾಲಿ ಬೇಂದ್ರೆ ಜತೆ ಪತಿ ಗೋಲ್ಡಿ ಬೆಹಲ್‌ .......
ಪತಿಯೊಂದಿಗೆ ಸೋನಾಲಿ ಬೇಂದ್ರೆ
ಪತಿಯೊಂದಿಗೆ ಸೋನಾಲಿ ಬೇಂದ್ರೆ
ನವದೆಹಲಿ: ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ನ್ಯೂಯಾರ್ಕ್‌ ನಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಪಡೆದು ಇದೀಗ ಮುಂಬಯಿಗೆ ಮರಳಿದ್ದಾರೆ. ಸೊನಾಲಿ ಬೇಂದ್ರೆ ಜತೆ ಪತಿ ಗೋಲ್ಡಿ ಬೆಹಲ್‌ ಇರುವುದನ್ನು ಮಾಧ್ಯಮದವರು ತಮ್ಮ ಕ್ಯಾಮೆರಾದಲ್ಲಿ  ಸೆರೆ ಹಿಡಿದರು.
ಮುಂಬಯಿ ವಿಮಾನ ನಿಲ್ದಾಣದಲ್ಲಿ  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸೋನಾಲಿ ಬೇಂದ್ರೆ ಪತಿ ಗೋಲ್ಡಿ ಬೆಹೆಲ್, ಸದ್ಯ ಸೋನಾಲಿ ಅವರ ಚಿಕಿತ್ಸೆ ಸಂಪೂರ್ಣಗೊಂಡಿದೆ. ಅದಾದ ನಂತರ ನಿಯಮಿತ ಚೆಕ್ ಅಪ್ ಇರುತ್ತದೆ. ಸೋನಾಲಿ ಈಗ ಆರೋಗ್ಯವಾಗಿದ್ದಾರೆ, ಮರಳಿ ಹಿಂದಿನಂತೆ ಆಗಿದ್ದಾರೆ, ರಿಕವರಿ ಆಗುತ್ತಾರೆ.
ಸದ್ಯಕ್ಕೆ ಚಿಕಿತ್ಸೆ ಮುಗಿದಿದೆ. ಆದರೆ ಒಮ್ಮೆ ಈ ಕಾಯಿಲೆ ಬಂದರೇ ಪದೇ ಪದೇ ಚೆಕ್ ಅಪ್ ಮಾಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇನ್ನೂ ಸೋನಾಲಿ ಬೇಂದ್ರೆ ಕೂಡ ತಮ್ಮ ಪೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com