ಕನ್ನಡದ 'ಕೆಜಿಎಫ್ ಮುಂದೆ ಬಾಲಿವುಡ್ ಜೀರೋ' ಬಾಕ್ಸ್ ಆಫಿಸ್ ಕಲೆಕ್ಷನ್'ನಲ್ಲಿ ತೋಪು!

ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಚಿತ್ರದ ಮುಂದೆ ಬಾಲಿವುಡ್ ತಾರೆ ಶಾರೂಖ್ ಖಾನ್ ನಟನೆಯ ಜಿರೋ ಚಿತ್ರ ಪ್ರೇಕ್ಷಕರನ್ನು ಹೆಚ್ಚಿನ ಮಟ್ಟದಲ್ಲಿ ಸೆಳೆಯುವಲ್ಲಿ ಹಿಂದೆ ಬಿದ್ದಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್
ಕನ್ನಡದ 'ಕೆ.ಜಿಎಫ್ ಮುಂದೆ ಬಾಲಿವುಡ್  ಜೀರೋ' ಬಾಕ್ಸ್ ಆಫಿಸ್ ಕಲೆಕ್ಷನ್' ನಲ್ಲಿ ತೋಪು!
ಕನ್ನಡದ 'ಕೆ.ಜಿಎಫ್ ಮುಂದೆ ಬಾಲಿವುಡ್ ಜೀರೋ' ಬಾಕ್ಸ್ ಆಫಿಸ್ ಕಲೆಕ್ಷನ್' ನಲ್ಲಿ ತೋಪು!
ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಚಿತ್ರದ ಮುಂದೆ ಬಾಲಿವುಡ್ ತಾರೆ ಶಾರೂಖ್ ಖಾನ್ ನಟನೆಯ ಜಿರೋ ಚಿತ್ರ ಪ್ರೇಕ್ಷಕರನ್ನು ಹೆಚ್ಚಿನ ಮಟ್ಟದಲ್ಲಿ ಸೆಳೆಯುವಲ್ಲಿ ಹಿಂದೆ ಬಿದ್ದಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ ನಲಿಯೂ ಕ್ಷೀಣಿಸಿದೆ. 
ಡಿ.21 ರಂದು ಬಿಡುಗಡೆಯಾದ ಜೀರೋ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ ಚಿತ್ರಕಥೆಯನ್ನು ಪ್ರೇಕ್ಷಕರು ಟೀಕಿಸುತ್ತಿದ್ದಾರೆ. ಪ್ರಾರಂಭದ ದಿನ 20 ಕೋಟಿ ಕಲೆಕ್ಷನ್ ಮಾಡಿದ್ದ ಜೀರೋ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ 2 ನೇ ದಿನದಿಂದ ಕ್ಷೀಣಿಸಿದ್ದು, ಇತ್ತೀಚಿನ ಕಲೆಕ್ಷನ್ ವಿವರಗಳನ್ನು ಟ್ರೇಡ್ ಅನಾಲಿಸ್ಟ್  ತರಣ್ ಆದರ್ಶ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. 
"2 ನೇ ದಿನ ಜೀರೋ ಚಿತ್ರದ ಕಲೆಕ್ಷನ್ ಸೊರಗಿದೆ. 2 ನೇ ದಿನದಿಂದ ಬಾಕ್ಸ್ ಆಫೀಸ್ ಕಲೆಕ್ಷನ್ ಏರಿಕೆಯಾಗಬೇಕಿತ್ತು. ಆದರೆ ಸೊರಗುತ್ತಿದೆ. ಶುಕ್ರವಾರ 20.14 ಕೋಟಿಯಷ್ಟಿದ್ದ ಬಾಕ್ಸ್ ಆಫೀಸ್ ಕಲೆಕ್ಷನ್ ಮೊತ್ತ  ಶನಿವಾರದಂದು 18.22 ಕೋಟಿಗೆ ಇಳಿಕೆಯಾಗಿದ್ದು ಒಟ್ಟಾರೆ 38 ಕೋಟಿ ಗಳಿಸಲಷ್ಟೇ ಶಕ್ತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com