ಬೆಂಗಳೂರು: ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, 3ಡಿ ವರ್ಸನ್ ಸಿನಿಮಾಗೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.
ಪೌರಾಣಿಕ ಸಿನಿಮಾ ಕುರುಕ್ಷೇತ್ರ ವನ್ನು ನಾಗಣ್ಣ ನಿರ್ದೇಶಿಸಿದ್ದಾರೆ.ಇದು ದರ್ಶನ್ 50ನೇ ಸಿನಿಮಾವಾಗಿದ್ದು ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಕುರುಕ್ಷೇತ್ರ ಸಿನಿಮಾ ತಂಡ ಮೆಗಾ ಆಡಿಯೋ ರಿಲೀಸ್ ಗೆ ಸಿದ್ಧತೆ ನಡೆಸುತ್ತಿದೆ, ಜನವರಿ 27 ರಂದು ಆಡಿಯೋ ಬಿಡುಗಡೆಯಾಗುವ ಸಾಧ್ಯಕೆಯಿದೆ.ವಿ ಹರಿ ಕೃಷ್ಣ ಸಂಗಿತ ನಿರ್ದೇಶಿಸಿರುವ ಕುರುಕ್ಷೇತ್ರ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ದಾಖಲೆ ಬೆಲೆಗೆ ಖರೀದಿಸಿದೆ.
ದರ್ಶನ್ ಅವರ 50ನೇ ಸಿನಿಮಾ ಇದಾಗಿರುವುದರಿಂದ ಅವರ ಅಭಿಮಾನಿಗಳಲ್ಲಿ ಬಾರೀ ನಿರೀಕ್ಷೆ ಹಾಗೂ ಕುತೂಹಲ ಹುಟ್ಟಿಸಿದೆ,. ತಾರಕ್ ನಂತರ ದರ್ಶನ್ ಯಾವುದೇ ಸಿನಿಮಾ ರಿಲೀಸ್ ಆಗದಿರುವುದು ದರ್ಶನ್ ಅವರಿಗೆ ಬೇಸರ ತರಿಸಿದೆ,
ಹೀಗಾಗಿ ಅಭಿಮಾನಿಗಳು ದುರ್ಯೋಧನನ ಅವತಾರದಲ್ಲಿ ದರ್ಶನ್ ರನ್ನು ನೋಡು ಕಾಯುತ್ತಿದ್ದಾರೆ.