ಪ್ರಭಾಸ್, ಯಶ್
ಸಿನಿಮಾ ಸುದ್ದಿ
ಒಂದೇ ಚಿತ್ರದಲ್ಲಿ ರಾಕಿ ಭಾಯ್- ಬಾಹುಬಲಿ?
ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಹುಬಲಿ ಖ್ಯಾತಿಯ ಪ್ರಭಾಸ್ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬಂತಹ ಸುದ್ದಿಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.
ಬೆಂಗಳೂರು: ಕಳೆದ ಶುಕ್ರವಾರ ಐದು ಭಾಷೆಗಳಲ್ಲಿ ತೆರೆಕಂಡ ಕೆಜಿಎಫ್ ಚಿತ್ರ ದೇಶ, ವಿದೇಶಗಳಲ್ಲಿ ಸದ್ದು ಮಾಡುತ್ತಿದ್ದು, ಗಳಿಕೆ ವಿಚಾರದಲ್ಲಿ ಶಾರೂಖ್ ಅಭಿಯನದ ಜೀರೋ ಚಿತ್ರವನ್ನು ಹಿಂದಿಕ್ಕಿದೆ.
ಮೊದಲ ಮೂರು ದಿನಗಳಲ್ಲಿ ಕೆಜಿಎಫ್ 59.60 ಕೋಟಿ ರೂ. ಗಳಿಕೆ ಮಾಡಿದರೆ, ಜೀರೋ 59. 07ಕೋಟಿರೂ. ಗಳಿಸಿದೆ. ವಿದೇಶದಲ್ಲಿಯೂ ಕೆಜಿಎಫ್ ಕಮಲ್ ಮಾಡಿದ್ದು, ಉತ್ತಮ ಲಾಭವಾಗಿದೆ ಎಂಬುದು ತಿಳಿದುಬಂದಿದೆ.
ಈ ಮಧ್ಯೆ ಕೆಜಿಎಫ್ ಚಿತ್ರದ ರಾಕಿಬಾಯ್ ಯಶ್ ಕೂಡಾ ಭಾರತದ ಸೂಪರ್ ಸ್ಟಾರ್ ಆಗಿ ರೂಪುಗೊಂಡಿದ್ದು, ದೇಶ, ವಿದೇಶಗಳಲ್ಲಿಯೂ ಹೆಸರು ಪಡೆಯುವಂತಾಗಿದೆ. ಇದರ ಬೆನ್ನಲ್ಲೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಹುಬಲಿ ಖ್ಯಾತಿಯ ಪ್ರಭಾಸ್ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬಂತಹ ಸುದ್ದಿಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.
ಆ ಚಿತ್ರವನ್ನು ರಾಜ್ ಕುಮಾರ್ ಹಿರಾನಿ ನಿರ್ದೇಶನ ಮಾಡಲಿದ್ದಾರೆ ಎಂಬುದು ಮತ್ತೊಂದು ವಿಶೇಷವಾದ ಸಂಗತಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ