ಹೈದರಾಬಾದ್ ಜಿಎಸ್ ಟಿ ಆಯುಕ್ತರ ಕಚೇರಿ ಈ ಬಗ್ಗೆ ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನಟ ಮಹೇಶ್ ಬಾಬು ಅವರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ ಎಂದು ತಿಳಿಸಿದೆ. ಮಹೇಶ್ ಬಾಬು ಅವರು, 2007-08ರಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದ ಜಾಹಿರಾತು ಉತ್ಪನ್ನಗಳ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಅವರ ಬ್ಯಾಂಕ್ ಖಾತೆಗಳ ಫ್ರೀಜ್ ಮಾಡಲಾಗಿದೆ ಎಂದು ಹೇಳಿದೆ.