ಪುನೀತ್ ಅಭಿನಯದ ನಟಸಾರ್ವಭೌಮ ಚಿತ್ರದ 'ಪಾರ್ಟಿ' ಹಾಡು ವೈರಲ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ನಟ ಸಾರ್ವಭೌಮ ಚಿತ್ರದಲ್ಲಿ ಪಾರ್ಟಿಯಲ್ಲಿ ಕುಡಿತದ ಮೇಲಿನ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ  ನಟ ಸಾರ್ವಭೌಮ ಚಿತ್ರದಲ್ಲಿ ಪಾರ್ಟಿಯಲ್ಲಿ ಕುಡಿತದ ಮೇಲಿನ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಈ ಹಾಡು ಬಿಡುಗಡೆಯಾದ ಕೇವಲ ಒಂದು ಗಂಟೆಯಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,  ಕೆಲವರು ಇಷ್ಟಪಟ್ಟರೆ , ಮತ್ತೆ ಕೆಲವರು ಆ ರೀತಿಯ ಚಿತ್ರ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.
ನೃತ್ಯ ಸಂಯೋಜಕ ಜಾನಿ ಅವರೊಂದಿಗೆ  ಪುನೀತ್ ರಾಜ್ ಕುಮಾರ್ ಈ  ಟ್ರಾಕ್ ಗೆ ಸ್ಟೆಪ್ ಹಾಕುತ್ತಾರೆ. ಯೋಗ ರಾಜ್ ಭಟ್  ಬರೆದಿರುವ ಈ ಗೀತೆಯನ್ನು ಕುಡಿತದ ಚಟ ತಪ್ಪು ಎಂದು ಅರಿತ ಅನೇಕ ಜನರು ಮೆಚ್ಚಿಕೊಂಡಿದ್ದಾರೆ. ಬೆಳಗ್ಗೆ 3 ಗಂಟೆಯವರೆಗೂ ಕುಳಿತು ಈ ಗೀತೆ ಸಂಯೋಜನೆ ಮಾಡಲಾಗಿದೆ ಎಂದು ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com