'ಆಶಾ ಸುಂದರಿ' ಖ್ಯಾತಿಯ ದಕ್ಷಿಣ ಭಾರತದ ಹಿರಿಯ ನಟಿ ಕೃಷ್ಣ ಕುಮಾರಿ ನಿಧನ

'ಆಶಾ ಸುಂದರಿ' ಖ್ಯಾತಿಯ ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಕೃಷ್ಣ ಕುಮಾರಿ ಅವರು ಬುಧವಾರ ನಿಧನರಾಗಿದ್ದು, ಅವರಿಗೆ 84 ವರ್ಷ ವಯಸ್ಸಾಗಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: 'ಆಶಾ ಸುಂದರಿ' ಖ್ಯಾತಿಯ ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಕೃಷ್ಣ ಕುಮಾರಿ ಅವರು ಬುಧವಾರ ನಿಧನರಾಗಿದ್ದು, ಅವರಿಗೆ 84 ವರ್ಷ ವಯಸ್ಸಾಗಿತ್ತು.
ಕೃಷ್ಣಕುಮಾರಿ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಬುಧವಾರ ಬೆಳಗ್ಗೆ ನಿಧನರಾಗಿದ್ದು, ಕೃಷ್ಣ ಕುಮಾರಿ ಅವರು ತೀವ್ರ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಕೃಷ್ಣ ಕುಮಾರಿ ಅವರು ಬುಧವಾರ  ಮುಂಜಾನೆ 6 ಗಂಟೆಗೆ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದು, ಹಿರಿಯ ನಟಿ ಸಾಹುಕಾರ್​ ಜಾನಕಿ ಅವರ ಸಹೋದರಿ ಕೂಡ ಕೃಷ್ಣ ಕುಮಾರಿ ಅವರು ಕಳೆದ ಮೂರು ವರ್ಷಗಳಿಂದ ಮಗಳೊಂದಿಗೆ ಬೆಂಗಳೂರಿನ ಕನಕಪುರ  ರಸ್ತೆಯ ಗುಬ್ನಾಳ್ಳದಲ್ಲಿ ನೆಲೆಸಿದ್ದರು. ನಾಳೆ ಬ್ರಾಹ್ಮಣ ವಿಧಿ ವಿಧಾನದಂತೆ ಕೃಷ್ಣ ಕುಮಾರಿ ಅವರ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ.
ಕೃಷ್ಣಕುಮಾರಿ ಅವರು ಜನಿಸಿದ್ದು 1933ರ ಮಾರ್ಚ್ 6ರಂದು ಪಶ್ಚಿಮ ಬಂಗಾಳದಲ್ಲಿ. ಆದರೆ ಅವರು ಗುರುತಿಸಿಕೊಂಡಿದ್ದು ತೆಲುಗು, ಕನ್ನಡ ಹಾಗೂ ತಮಿಳು ಚಿತ್ರಗಳ ಮೂಲಕ. 1951ರಲ್ಲಿ ತೆರೆಕಂಡ 'ನವ್ವಿತೆ ನವರತ್ನಾಲು' ಎಂಬ  ತೆಲುಗು ಚಿತ್ರದ ಮೂಲಕ ಅವರು ಬೆಳ್ಳಿಪರದೆಗೆ ಪದಾರ್ಪಣೆ ಮಾಡಿದ್ದರು. ದಕ್ಷಿಣ ಭಾರತದ ಖ್ಯಾತ ನಟರಾದ ಡಾ. ರಾಜ್​ ಕುಮಾರ್​, ಎನ್​ ಟಿಆರ್​, ಎಎನ್​ ಆರ್​, ಶಿವಾಜಿ ಗಣೇಶನ್​ ಸೇರಿದಂತೆ ಹಲವು ಸ್ಟಾರ್​ ನಟರೊಂದಿಗೆ ಕೃಷ್ಣ  ಕುಮಾರಿ ಅವರು ಅಭಿನಯಿಸಿದ್ದರು. 
ತೆಲುಗು, ಕನ್ನಡ ಹಾಗೂ ತಮಿಳು ಭಾಷೆ ಸೇರಿದಂತೆ ಸುಮಾರು 230 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೃಷ್ಣ ಕುಮಾರಿ ನಟಿಸಿದ್ದರು. 60ರ ದಶಕದಲ್ಲಿ ನಟನೆಯ  ಖ್ಯಾತಿಯ ಉತ್ತುಂಗದಲ್ಲಿದ್ದ ಕೃಷ್ಣಕುಮಾರಿ ಅವರು ಕನ್ನಡದಲ್ಲಿ ಭಕ್ತ ಕನಕದಾಸ  (1960), ಜಲದುರ್ಗ, ಆಶಾಸುಂದರಿ (1960), ದಶಾವತಾರ (1960), ಶ್ರೀಶೈಲ ಮಹಾತ್ಮೆ (1961), ಸ್ವರ್ಣಗೌರಿ (1962), ಭಕ್ತ ಕಬೀರ (1962), ಚಂದ್ರ ಕುಮಾರ, ಸತಿ ಸಾವಿತ್ರಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅವರು  ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com