ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಟಿ ಅಮಲಾ, ಡ್ಯಾನ್ಸ್ ರಿಹರ್ಸಲ್ ಮಾಡುವಾಗ ತನ್ನ ಬಳಿ ಬಂದ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ. ನನ್ನನ್ನು ಲೈಂಗಿಕ ಬಳಸಿಕೊಳ್ಳುವ ಕುರಿತು, ಬೇರೊಬ್ಬರಿಗೆ ಮಾರಾಟ ಮಾಡುವ ಕುರಿತು ಅಸಭ್ಯವಾಗಿ ಮಾತನಾಡಿದ. ಅಲ್ಲದೆ ತನ್ನ ಲೈಂಗಿಕ ಕಾಮನೆಗಳನ್ನು ತೀರಿಸುವಂತೆ ಕೇಳಿದ. ಆತನ ಮಾತುಗಳನ್ನು ಕೇಳಿ ನಿಜಕ್ಕೂ ನಾನು ಆಘಾತಕ್ಕೊಳಗಾದೆ. ಇದೇ ಕಾರಣಕ್ಕೆ ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ನಟಿ ಅಮಲಾ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ಒಂಟಿ ಉದ್ಯೋಗಸ್ಥ ಮಹಿಳೆಯರಿಗೆ ಭದ್ರತೆ ಬೇಕು ಎಂದು ಹೇಳಿದ್ದಾರೆ.