ಟಾಲಿವುಡ್ ನಲ್ಲಿ ಲೂಸ್ ಮಾದ ಯೋಗಿ 'ಫಲ್ಗುಣ್' ಅದೃಷ್ಟ ಪರೀಕ್ಷೆ!

ಲೂಸ್ ಮಾದ ಖ್ಯಾತಿಯ ಯೋಗಿ ಸದ್ಯ ಸ್ಯಾಂಡಲ್ವುಡ್ ನಲ್ಲಿ ಬೇಡಿಕೆ ನಟನಾಗಿದ್ದು ಇದೀಗ ಟಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ...
ಯೋಗಿ ಫಲ್ಗುಣ್
ಯೋಗಿ ಫಲ್ಗುಣ್
ಲೂಸ್ ಮಾದ ಖ್ಯಾತಿಯ ಯೋಗಿ ಸದ್ಯ ಸ್ಯಾಂಡಲ್ವುಡ್ ನಲ್ಲಿ ಬೇಡಿಕೆ ನಟನಾಗಿದ್ದು ಇದೀಗ ಟಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 
ಮೊನಗಾಡು ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಡಲು ಲೂಸ್ ಮಾದ ಯೋಗಿ ಸಿದ್ಧರಾಗಿದ್ದು ಚಿತ್ರವನ್ನು ಎಂಎಂ ವೆಂಕಟ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಕನ್ನಡದಲ್ಲೂ ನಿರ್ಮಾಣವಾಗುತ್ತಿದ್ದು ಚಿತ್ರಕ್ಕೆ ಪ್ರಳಯಾಂತಕ ಎಂದು ಹೆಸರಿಡುವ ಸಾಧ್ಯತೆ ಇದೆ. 
ತಮ್ಮ ಮಗನನ್ನು ಟಾಲಿವುಡ್ ಗೆ ಪರಿಚಯಿಸುವಂತೆ ಹಲವು ನಿರ್ಮಾಪಕರು ನನಗೆ ಸಲಹೆ ನೀಡಿದ್ದರು. ಅದು ನನಗೂ ಸರಿ ಅನಿಸಿ ಇದೀಗ ಪುತ್ರ ಯೋಗಿಯನ್ನು ಟಾಲಿವುಡ್ ಗೆ ಪರಿಚಯಿಸುತ್ತಿರುವುದಾಗಿ ನಿರ್ಮಾಪಕ ಟಿಪಿ ಸಿದ್ದರಾಜು ಹೇಳಿದ್ದಾರೆ. 
ಯೋಗಿಗೆ ಜತೆಯಾಗಿ ತೆಲುಗಿನ ಬಿಗ್ ಬಾಸ್ 2ನೇ ಆವೃತ್ತಿಯಲ್ಲಿ ಸ್ಫರ್ಧಿಸಿದ್ದ ಭಾನು ಶ್ರೀ ರೆಡ್ಡಿ ಅಭಿನಯಿಸುವ ಸಾಧ್ಯತೆ ಇದೆ. 
ಜೂನ್ ನಲ್ಲಿ ಚಿತ್ರದ ಮುಹೂರ್ತ ನಡೆಯಲಿದ್ದು ಆಗಸ್ಟ್ ನಿಂದ ಚಿತ್ರೀಕರಣ ನಡೆಯಲಿದೆ. ಸದ್ಯ ಯೋಗಿ ಲಂಬೋದರ ಮತ್ತು ಜಾನಕಿರಾಮ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಯೋಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದು ಇನ್ನು ಮುಂದೆ ಅವರು ಯೋಗಿ ಫಲ್ಗುಣ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com