ಮಂಜು ಸ್ವರಾಜ್ ಹಾರರ್ ಕಾಮಿಡಿಯಲ್ಲಿ ನಟಿ ಕಾರುಣ್ಯ ರಾಮ್

ಮಂಜು ಸ್ವರಾಜ್ ನಿರ್ದೇಶನದ ಹಾರರ್ ಕಾಮಿಡಿ ಸಿನಿಮಾದಲ್ಲಿ ನಟಿ ಕಾರುಣ್ಯಾ ರಾಮ್ ಅಭಿನಯಿಸುತ್ತಿದ್ದಾರೆ...
ಕಾರುಣ್ಯ ರಾಮ್
ಕಾರುಣ್ಯ ರಾಮ್
ಬೆಂಗಳೂರು: ಮಂಜು ಸ್ವರಾಜ್ ನಿರ್ದೇಶನದ ಹಾರರ್ ಕಾಮಿಡಿ ಸಿನಿಮಾದಲ್ಲಿ ನಟಿ ಕಾರುಣ್ಯಾ ರಾಮ್ ಅಭಿನಯಿಸುತ್ತಿದ್ದಾರೆ. 
ಎಸ್ ವಿ ಬಾಬು ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಶೂಟಿಂಗ್ ಇಂದಿನಿಂದ ಆರಂಭವಾಗಲಿದೆ,ಈ ಸಿನಿಮಾದಲ್ಲಿ ಪಾರ್ಶ್ವಿತಾ  ಎಂಬ ಬಾಲ ಕಲಾವಿದೆ ಕೂಡ ನಟಿಸುತ್ತಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಡಬ್ ಸ್ಮ್ಯಾಶ್ ಮೂಲಕ ಪಾಪುಲರ್ ಆಗಿರುವ  ಈಗೆ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ಮತ್ತೊಬ್ಬ ಹಿರಿಯ ಕಲಾವಿದ ಗಿರಿ ಕೂಡ ಅಭಿನಯಿಸುತ್ತಿದ್ದಾರೆ,.
ಕೆ.ಆರ್ ಪೇಟೆ ಶಿವರಾಮ, ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಅಭಿನಯಿಸಿದ್ದಾರೆ, ನಾನು ಎಸ್ ವಿ ಬಾಬು ಅವರ ಸಿನಿಮಾದಲ್ಲಿ ಕೆಲಸ ಮಾಡುವುದು ತಪ್ಪಿತ್ತು. ಈ ಸಿನಿಮಾ ಮೂಲಕ ಮತ್ತೆ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂದು ಕಾರುಣ್ಯ ತಿಳಿಸಿದ್ದಾರೆ,
ಆಗಸ್ಟ್ ನಲ್ಲಿ ನಡೆಯುವ ಶೂಟಿಂಗ್ ಗಾಗಿ ದೊಡ್ಡ ಸೆಟ್ ಹಾಕಲಾಗಿದೆ, ಅಭಿಮಾನ್ ರಾಯ್ ಸಿನಿಮಾಗಾಗಿ  ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಶೃತಿ ಹರಿಹರನ್ ಕೂಡ ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com