ತಾಯಿಗೆ ತಕ್ಕ ಮಗ ಸ್ಟಿಲ್
ಸಿನಿಮಾ ಸುದ್ದಿ
'ತಾಯಿಗೆ ತಕ್ಕ ಮಗ' ಶೂಟಿಂಗ್ ಪೂರ್ಣ: ಸೆಪ್ಟಂಬರ್ ನಲ್ಲಿ ರಿಲೀಸ್
ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದ್ದು, ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ...
ಬೆಂಗಳೂರು: ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದ್ದು, ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಕೃಷ್ಣ ಅಜೇಯ್ ರಾವ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಸಿನಿಮಾದಲ್ಲಿ ಸುಮಲತಾ ನಟಿಸಿದ್ದಾರೆ.
ಶಶಾಂಕ್ ನಿರ್ಮಿಸುತ್ತಿರುವ ಈ ಸಿನಿಮಾವನಮನ್ನು ರಾಘು ಕೋವಿ ಮತ್ತು ವೇದ್ ಗುರು ಅವರಿಗೆ ನೀಡಬೇಕಿತ್ತು, ಆದರೆ ಪ್ರಾಜೆಕ್ಟ್ ಬಗ್ಗೆ ಎಕ್ಸೈಟ್ ಅಗಿದ್ದ ಶಶಾಂಕ್ ತಾವೇ ನಿರ್ದೇಶನದ ಹೊಣೆ ಹೊತ್ತರು.
75 ದಿನಗಳಲ್ಲಿ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಎಂದು ಶಶಾಂಕ್ ಹೇಳಿದ್ದಾರೆ, ಸದ್ಯಕ್ಕೆ ಸಿನಿಮಾದ ಪೋಸ್ಚ್ ಪ್ರೊಡಕ್ಷನ್ ವರ್ಕ್ಸ್ ಬಗ್ಗೆ ಗಮನ ಹರಿಸುತ್ತಿದ್ದು ಸೆಪ್ಟಂಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ