ರಣಂ ನಲ್ಲಿ ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿ ಚಿರಂಜೀವಿ ಸರ್ಜಾ

ವಿ.ಸುಮದ್ರ ನಿರ್ದೇಶನದ ರಣಂ ಸಿನಿಮಾದಲ್ಲಿ ಬಹು ತಾರಾಗಣದ ಸಮಾಗಮವಾಗಿದೆ. ಚಿರಂಜೀವಿ ಸರ್ಜಾ ಮತ್ತು ಚೇತನ್ ...
ಚೇತನ್ ಕುಮಾಕ್ ಮತ್ತು ಚಿರಂಜೀವಿ ಸರ್ಜಾ
ಚೇತನ್ ಕುಮಾಕ್ ಮತ್ತು ಚಿರಂಜೀವಿ ಸರ್ಜಾ
Updated on
ಬೆಂಗಳೂರು: ವಿ.ಸುಮದ್ರ ನಿರ್ದೇಶನದ  ರಣಂ ಸಿನಿಮಾದಲ್ಲಿ ಬಹು ತಾರಾಗಣದ ಸಮಾಗಮವಾಗಿದೆ.ಚಿರಂಜೀವಿ ಸರ್ಜಾ ಮತ್ತು ಚೇತನ್ ಕುಮಾರ್ ಪರದೆ ಹಂಚಿಕೊಂಡಿದ್ದಾರೆ.
ಆರ್ ಎಸ್ ಪ್ರೊಡಕ್ಷನ್ ಅಡಿ ತಯಾರಾಗುತ್ತಿರುವ ರಣಂ ನಲ್ಲಿ ಕ್ರಾಂತಿಕಾರಿ ಪಾತ್ರದಲ್ಲಿ ಚೇತನ್ ಹಾಗೂ ಚಿರಂಜೀವಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ,
ಚೇತನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚೆಗುವಾರಿ ಪಾತ್ರದಲ್ಲಿ  ಹಾಗೂ ಚಿರಂಜೀವಿ ಸರ್ಜಾ ಎನ್ ಕೌಂಟರ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ಈಗಾಗಲೇ ಚೇತನ್ ಭಾಗದ ಶೂಟಿಂಗ್ ಮುಗಿದಿದ್ದು, ಚಿರಂಜೀವಿ ಪಾಲಿನ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ, ಮುಂದಿನ 15 ದಿನಗಳಲ್ಲಿಸ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ಸಿನಿಮಾ ರಿಲೀಸ್ ಗಾಗಿ ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಅವರ ಮನವೊಲಿಕೆಗೆ ನಿರ್ದೇಶಕರು ಪ್ರಯತ್ನ ಪಡುತ್ತಿದ್ದಾರೆ. ಪಾತ್ರದ ಬಗ್ಗೆ ನಿರೂಪಿಸಲು  ನಟರೊಬ್ಬರನ್ನು ಆಯ್ಕೆ ಮಾಡಲಾಗಿದೆ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ತಯಾರಾಗುತ್ತಿದೆ. ಗುರು ಕಿರಣ್ ಸಂಗಿತ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com