ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾ ಶೂಟಿಂಗ್ ರಾಮನಗರದ ಸುತ್ತಮುತ್ತ ನಡೆಯುತ್ತಿದೆ. ಎರಡು ಹಾಡುಗಳ ಚಿತ್ರೀಕರಣವನ್ನು ಈ ಪ್ರದೇಶದಲ್ಲಿ ಮಾಡಲಾಗಿದೆ.
ಪಂಚತಂತ್ರ ಸಿನಿಮಾದ ವಿಶೇಷ ಹಾಡಿಗೋಸ್ಕರ ನಿರ್ದೇಶಕರು ರೆಬೆಲ್ ಸ್ಚಾರ್ ಅಂಬರೀಷ್ ಅವರ ಬಳಿ ಹೋಗಿದ್ದಾರೆ, ಭಟ್ಟರ ನಿರ್ದೇಶದ ಡ್ರಾಮಾ ಸಿನಿಮಾದ ಬೊಂಬೆ ಆಡ್ಸೋನು ಹಾಡಿನಂತೆ ಪಂಚತಂತ್ರ ಚಿತ್ರದಲ್ಲೂ ಅಂಬರೀಷ್ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ,
ರೆಬೆಲ್ ಸ್ಟಾರ್ ಅಂಬರೀಷ್ ಸದ್ಯ ಗುರುದತ್ತ ಗಾಣಿಗ ನಿರ್ದಶನದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಪಂಚತಂತ್ರ ಸಿನಿಮಾದ ಹಾಡಿಗೆ ನಟಿಸಲು ಒಪ್ಪುತ್ತಾರೋ ಇಲ್ಲವೋ ತಿಳಿದಿಲ್ಲ ಎಂದು ಹೇಳಿದ್ದಾರೆ,
ಅಂಬರೀಷ್ ಗಾಗಿ ಬರೆದಿರುವ ವಿಶೇಷ ಟ್ರೇಲರ್ ಹಾಡಾಗಿದೆ ನೈಜ ಜೀವನಕ್ಕೆ ಹತ್ತಿರವಾದ ಹಾಡಾಗಿದೆ. ಅಂಬರೀಷ್ ತಮಗೆ ಲಕ್ಕಿ ಚಾರ್ಮ್ ಆಗಿದ್ದು, ಅವರು ತಮ್ಮ ಬೇಡಿಕೆಗೆ ಒಪ್ಪುತ್ತಾರೆ ಎಂದು ಭಟ್ ತಿಳಿಸಿದ್ದಾರೆ,
ವಿಹಾನ್ ಮತ್ತು ಸೋನಲ್ ಹಾಗೂ ಅಕ್ಷರ ಗೌಡ ನಟಿಸಿದ್ದಾರೆ. ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ.