ಮೊದಲ 'ಬಾಂಡ್ ಗರ್ಲ್' ಯುನೈಸ್ ಗೇಸನ್ ನಿಧನ

ಹೆಸರಾಂತ ಹಾಲಿವುಡ್ ನಟಿ, ಪ್ರಥಮ ’ಬಾಂಡ್ ಗರ್ಲ್’ ಯುನೈಸ್ ಗೇಸನ್ ಜೂನ್ 8ರಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಮೊದಲ 'ಬಾಂಡ್ ಗರ್ಲ್' ಯುನೈಸ್ ಗೇಸನ್ ನಿಧನ
ಮೊದಲ 'ಬಾಂಡ್ ಗರ್ಲ್' ಯುನೈಸ್ ಗೇಸನ್ ನಿಧನ
Updated on
ವಾಷಿಂಗ್ ಟನ್: ಹೆಸರಾಂತ ಹಾಲಿವುಡ್ ನಟಿ, ಪ್ರಥಮ ’ಬಾಂಡ್ ಗರ್ಲ್’ ಯುನೈಸ್ ಗೇಸನ್ ಜೂನ್ 8ರಂದು  ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
1962ರಲ್ಲಿ ತೆರೆಕಂಡ "ಜೇಮ್ಸ್ ಬಾಂಡ್"ಫ್ರ್ಯಾಂಚೈಸ್ ಸ್ಟಾರ್ಟರ್ "ಡಾ ನೋ" ನಲ್ಲಿ ಸೀನ್ ಕಾನರಿ ಜತೆಗೆ ’ಬಾಂಡ್ ಗರ್ಲ್’ ಆಗಿ ಕಾಣಿಸಿಕೊಂಡಿದ್ದ ಗೇಸನ್ ನಿಧನರಾಗಿದ್ದಾರೆಂದು ವೆರೈಟಿ ವರದಿ ಮಾಡಿದೆ.
ಜೇಮ್ಸ್ ಬಾಂಡ್ ಚಲನಚಿತ್ರ ನಿರ್ಮಾಪಕ ಮೈಕೆಲ್ ಜಿ. ವಿಲ್ಸನ್ ಮತ್ತು ಬಾರ್ಬರಾ ಬ್ರೊಕೊ ಜೇಮ್ಸ್ ಬಾಂಡ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ.
'ಡಾ ನೋ' ಮತ್ತು 'ಫ್ರಮ್ ರಷ್ಯಾ ವಿತ್ ಲವ್’ ನಲ್ಲಿ ಸೀನ್ ಕಾನರಿ ಜತೆ ಕಾಣಿಸಿಕೊಂಡಿದ್ದ ಮೊಟ್ಟಮೊದಲ 'ಬಾಂಡ್ ಗರ್ಲ್' ಯುನೈಸ್ ಗೇಸನ್ ವಿಧಿವಶರಾಗಿದ್ದಾರೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ’ ಅವರು ಟ್ವೀಟ್ ಮಾಡಿದ್ದಾರೆ.
ಗೇಸನ್ ಬಾಂಡ್ ಸರಣಿಯ ಎರಡು ಚಿತ್ರಗಳಲ್ಲಿ ಖಾಣಿಸಿಕೊಂಡ ಏಕೈಕ ಬಾಂಡ್ ಗರ್ಲ್ ಆಗಿದ್ದರೆನ್ನುವುದು ವಿಶೇಷ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com