ಜಾನಿ ಮಾಸ್ಟರ್ ನೃತ್ಯದ ಪಾರ್ಟಿ ಹಾಡಿಗೆ ಹೆಜ್ಜೆ ಹಾಕಿರುವ 'ನಟ ಸಾರ್ವಭೌಮ'

ನಟಸಾರ್ವಭೌಮ ಚಿತ್ರತಂಡದ ಜೊತೆಗೆ ಪಾರ್ಟಿ ಮೂಡ್ ನಲ್ಲಿರುವ ನಟ ಪುನೀತ್ ರಾಜ್ ಕುಮಾರ್ ....
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್

ನಟಸಾರ್ವಭೌಮ ಚಿತ್ರತಂಡದ ಜೊತೆಗೆ ಪಾರ್ಟಿ ಮೂಡ್ ನಲ್ಲಿರುವ ನಟ ಪುನೀತ್ ರಾಜ್ ಕುಮಾರ್ ಈ ಚಿತ್ರದಲ್ಲಿ ಪಾರ್ಟಿ ಮಾಡುವ ಹಾಡಿನ ಸಾಲಿನ ಹೆಜ್ಜೆ ಹಾಕುತ್ತಿದ್ದಾರೆ.

ಪವನ್ ಒಡೆಯರ್ ನಿರ್ದೇಶನದ ಚಿತ್ರ ನಟಸಾರ್ವಭೌಮದ ಪಾರ್ಟಿ ಹಾಡಿಗೆ ದೊಡ್ಡ ಸೆಟ್ ನಿರ್ಮಿಸಲಾಗಿದ್ದು ಜಾನಿ ಮಾಸ್ಟರ್ ಕೊರಿಯೊಗ್ರಫಿಯ ಡಿ ಇಮ್ಮಾಮ್ ಸಂಗೀತಕ್ಕೆ ಪವರ್ ಸ್ಟಾರ್ ಡ್ಯಾನ್ಸ್ ಮಾಡಲಿದ್ದಾರೆ.

ವಿದೇಶಿ ಕಲಾವಿದರು, ಮುಂಬೈಯ ಡ್ಯಾನ್ಸರ್ ಗಳು, ಕಿರಿಯ ಕಲಾವಿದರು ಸೇರಿದಂತೆ ಸುಮಾರು 200 ಮಂದಿ ಕಲಾವಿದರು ಸೇರಿ ಬೆಂಗಳೂರಿನಲ್ಲಿ ನಾಲ್ಕು ದಿನ ಈ ಹಾಡಿನ ಚಿತ್ರೀಕರಣ ನಡೆಯಲಿದೆ. ತಮ್ಮ ವಿಭಿನ್ನ ಶೈಲಿನ ನೃತ್ಯ ಶೈಲಿಗೆ ಹೆಸರಾಗಿರುವ ಪವರ್ ಸ್ಟಾರ್ ಪುನೀತ್ ಅವರ ಈ ನೃತ್ಯ ಕೂಡ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿರುವ ನಟಸಾರ್ವಭೌಮ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ನಾಯಕಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com