ಆದಿತ್ಯ- ರವಿ ಶ್ರೀವತ್ಸ 'ಡೆಡ್ಲಿ' ಕಾಂಬಿನೇಷನ್ ನಲ್ಲಿ ಹೊಸ ಚಿತ್ರ!

ನಟ ಆದಿತ್ಯ ಹಾಗೂ ನಿರ್ದೇಶಕ ರವಿ ಶ್ರಿವತ್ಸ ಅವರ ಡೆಡ್ಲಿ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರಕ್ಕೆ ಸಿದ್ದವಾಗುತ್ತಿದ್ದಾರೆ,...
ಆದಿತ್ಯ ಮತ್ತು ರವಿ ಶ್ರೀವತ್ಸ
ಆದಿತ್ಯ ಮತ್ತು ರವಿ ಶ್ರೀವತ್ಸ
ಬೆಂಗಳೂರು: ನಟ ಆದಿತ್ಯ ಹಾಗೂ ನಿರ್ದೇಶಕ ರವಿ ಶ್ರಿವತ್ಸ ಅವರ 'ಡೆಡ್ಲಿ' ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರಕ್ಕೆ ಸಿದ್ದವಾಗುತ್ತಿದ್ದಾರೆ,
'ಡೆಡ್ಲಿ ಸೋಮ', 'ಡೆಡ್ಲಿ 2', 'ಎದೆಗಾರಿಕೆ' 'ಬೆಂಗಳೂರು ಅಂಡರ್ ವರ್ಲ್ಡ್' ಹೀಗೆ ಭೂಗತ ಲೋಕದ ಚಿತ್ರಗಳಿಗೆ ಬ್ರಾಂಡ್ ಆಗಿದ್ದ ಆದಿತ್ಯ ಅದರಿಂದ ಈಗ ಆಚೆ ಬರುವ ಪ್ಲಾನ್ ಮಾಡಿದ್ದಾರೆ.
ಆದಿತ್ಯ ಈಗ ಒಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ರವಿ ಶ್ರೀವತ್ಸ ನಿರ್ದೇಶನ ಮಾಡುತ್ತಿದ್ದಾರೆ. ಇತ್ತ ರವಿ ಶ್ರೀವತ್ಸ ಕೂಡ ಮಚ್ಚು ಲಾಂಗು ಸಿನಿಮಾಗಳಿಗೆ ಹೆಸರುವಾಸಿ. ಆದಿತ್ಯ ಮತ್ತು ರವಿ ಶ್ರೀವತ್ಸ 'ಡೆಡ್ಲಿ ಸೋಮ', 'ಡೆಡ್ಲಿ 2' ನಂತರ ಮತ್ತೆ ಒಂದಾಗಿ ಹೊಸ ಸಿನಿಮಾ ಶುರು ಮಾಡಿದ್ದಾರೆ. ಹೀಗಿದ್ದರೂ ಈ ಚಿತ್ರ ಅಂಡರ್ ವರ್ಲ್ಡ್ ಕಥೆ ಹೊಂದಿಲ್ಲ.
ಈ ವಿಷಯವನ್ನು ಸ್ವತಃ ನಾಯಕ ಆದಿತ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರವಿ ಶ್ರೀ ವತ್ಸ ಅವರ ಜೊತೆಗೆ ಮೂರನೇ ಸಿನಿಮಾ ಮಾಡುತ್ತಿದ್ದು, ಅದಕ್ಕೆ ಟೈಟಲ್ ಸೂಚಿಸಿ ಎಂದು ಅಭಿಮಾನಿಗಳಲ್ಲಿ ಕೇಳಿ ಕೊಂಡಿದ್ದಾರೆ.
ಇದು ಒಂದು ಪಕ್ಕಾ ಕಮರ್ಶಿಯಲ್ ಸಿನಿಮಾ ಆಗಿದೆಯಂತೆ. ಟೈಟಲ್ ಅಂತಿಮವಾಗಬೇಕಿದ್ದು ಹಾಗೂ ಶೀಘ್ರವೇ ಪ್ರಾಜೆಕ್ಟ್ ಲಾಂಚ್ ಆಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com