ಹೊಟ್ಟೆ ಹುಣ್ಣಾಗುವಂತೆ ನಗಿಸಲು ಮತ್ತೆ ಬರುತ್ತಿದ್ದಾನೆ 'ಪಾಪಾ ಪಾಂಡು'

ದಶಕಗಳ ಹಿಂದೆ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದ ಕಿರುತೆರೆ ಬ್ಲಾಕ್ ಬಸ್ಟರ್ ಪಾಪಾ ಪಾಂಡು ಧಾರಾವಾಹಿ ಮತ್ತೆ ಹೊಸ ಅವತಾರದಲ್ಲಿ ಕಿರುತೆರೆಗೆ ಅಪ್ಪಳಿಸಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ದಶಕಗಳ ಹಿಂದೆ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದ ಕಿರುತೆರೆ ಬ್ಲಾಕ್ ಬಸ್ಟರ್ ಪಾಪಾ ಪಾಂಡು ಧಾರಾವಾಹಿ ಮತ್ತೆ ಹೊಸ ಅವತಾರದಲ್ಲಿ ಕಿರುತೆರೆಗೆ ಅಪ್ಪಳಿಸಲಿದೆ.
ಹಳೆಯ ಪಾತ್ರಗಳನ್ನೇ ಇಟ್ಟುಕೊಂಡು ಹೊಸ ಅವತಾರದ ಪಾಪಾ ಪಾಂಡು ಇದೇ ಜುಲೈ 2ರಿಂದ ಪ್ರತೀ ದಿನ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. ಈ ಹಿಂದೆ ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಇನ್ನು ಮುಂದೆ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.
ವಿಶೇಷವೆಂದರೆ ಈ ಹೊಸ ಅವತಾರದ ಪಾಪಾ ಪಾಂಡುಗೆ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಸಿಹಿಕಹಿ ಚಂದ್ರು ಅವರು ನಿರ್ದೇಶನ ಮಾಡುತ್ತಿದ್ದು, ಪಾಂಡು ಪಾಚ್ರದಲ್ಲಿ ಚಿದಾನಂದ್ ಹಾಗೂ ಶ್ರೀಮತಿ ಪಾತ್ರದಲ್ಲಿ ಶಾಲಿನಿ ಅಭಿನಯಿಸಿದ್ದಾರೆ. ಈ ಬಗ್ಗೆ ಸಂತಸದಿಂದಲೇ ಮಾತನಾಡಿರುವ ಚಿದಾನಂದ್, ಪಾಪಾ ಪಾಂಡು ಧಾರಾವಾಹಿಯಿಂದಲೇ ನಾನು ಚಿರಪರಿಚಿತನಾದೆ. ಈಗ ಅದೇ ಧಾರಾವಾಹಿಯಲ್ಲಿ ಅದೇ ಪಾತ್ರಕ್ಕೆ ಅವಕಾಶ ದೊರೆತಿರುವುದು ನಿಜಕ್ಕೂ ಸಂತಸ ತಂದಿದೆ. ಈ ಧಾರಾವಾಹಿಯ ತಂಡ ನನ್ನ ಕುಟುಂಬವಿದ್ದಂತೆ. ಮತ್ತೆ ನಾನು ಕುಟುಂಬ ಸೇರುತ್ತಿರುವುದಕ್ಕೆ ಸಂತಸವಾಗುತ್ತಿದೆ. ಮತ್ತೆ ಪಾಂಡು ಪಾತ್ರಧಾರಿಯಾಗಲು ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.
ಪಾಂಡು ಜೊತೆಗೆ ಕಲರ್ಸ್ ಕನ್ನಡ 7 ಹೊಸ ಕಾರ್ಯಕ್ರಮಗಳು ಪ್ರಸಾರವಾಗಲಿದ್ದು, 5 ಧಾರಾವಾಹಿಗಳು ಹಾಗೂ 2 ರಿಯಾಲಿಟಿ ಷೋಗಳು ಪ್ರಸಾರವಾಗಲಿದೆ. ಈ ಪೈಕಿ ಇವಳೇ ವೀಣಾಪಾಣಿ, ರಾಜಾ ರಾಣಿ, ಟಿಎನ್ ಸೀತಾರಾಮ್ ಅವರ ಕಮ್ ಬ್ಯಾಕ್ ಧಾರಾವಾಳಿ ಮಗಳು ಜಾನಕಿ, ಮಾಂಗಲ್ಯಂ ತಂತುನಾನೇನಾ, ಮನೆಯೇ ಮಂತ್ರಾಲಯ ಎಂಬ ಹೊಸ ಧಾರಾವಾಹಿಗಳು ಪ್ರಸಾರವಾಗಲಿದೆ. ಇದಲ್ಲದೆ ಮಜಾ ಭಾರತ ಮತ್ತು ಕನ್ನಡ ಕೋಗಿಲೆ ಎಂಬ ರಿಯಾಲಿಟಿ ಷೋಗಳೂ ಕೂಡ ಆರಂಭವಾಗಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com