ಚುನಾವಣೆ ಫಲಿತಾಂಶದೊಡನೆ ಬರಲಿದೆ ’ಆರೆಂಜ್’ ಟೀಸರ್!

ದಳಪತಿ’ ಚಿತ್ರದ ಬಿಡುಗಡೆಗೆ ಮುನ್ನವೇ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರಶಾಂತ್ ರಾಜ್ ’ಆರೆಂಜ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರೈಸಿದ್ದಾರೆ.
ಚುನಾವಣೆ ಫಲಿತಾಂಶದೊಡನೆ ಬರಲಿದೆ ’ಆರೆಂಜ್’ ಟೀಸರ್!
ಚುನಾವಣೆ ಫಲಿತಾಂಶದೊಡನೆ ಬರಲಿದೆ ’ಆರೆಂಜ್’ ಟೀಸರ್!
ಬೆಂಗಳೂರು: ;ದಳಪತಿ’ ಚಿತ್ರದ ಬಿಡುಗಡೆಗೆ ಮುನ್ನವೇ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರಶಾಂತ್ ರಾಜ್ ’ಆರೆಂಜ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರೈಸಿದ್ದಾರೆ.
ಸಧ್ಯವೇ ತಮ್ಮ ಎರಡನೇ ಹಂತದ ಚಿತ್ರೀಕರಣ ಪ್ರಾರಂಭಿಸುವುದಾಗಿ ಹೇಳಿರುವ ನಿರ್ದೇಶಕ ’ಆರೆಂಜ್’ ನ ಮೊದಲ ಟೀಸರ್ ನ್ನು ಮೇ 15ಕ್ಕೆ ಬಿಡುಗಡೆಗೊಳಿಸುತ್ತಿರುವುದಾಗಿ ಸಾಮಾಜಿಕ ಮಾದ್ಯಮ ಮೂಲಕ ತಿಳಿಸಿದ್ದಾರೆ.
ಕಾಕತಾಳೀಯವೆನ್ನುವಂತೆ ಅದೇ ದಿನ ಕರ್ನಾಟಕ ಚುನಾವಣೆ ಫಲಿತಾಂಶವೂ ಬರುತ್ತಿದೆ. ಚುನಾವಣೆ ಫಲಿತಾಂಶದಂದೇ ಚಿತ್ರದ ಟೀಸರ್ ಬಿಡುಗಡೆಗೆ ನಿರ್ಮಾಪಕರು ಮುಂದಾಗಿದ್ದೇಕೆ ನ್ನುವುದು ಮಾತ್ರ ಇನ್ನೂ ನಿಗೂಢ. ಏನೇ ಇರಲಿ ’ಝೂಮ್’ ನಂತಹಾ ಚಿತ್ರ ನೀಡಿದ ಇದೇ ಜೋಡಿಯಿಂದ ಇನ್ನೊಂದು ಉತ್ತಮ ಚಿತ್ರದ ನಿರೀಕ್ಷೆಯಲ್ಲಿ ಪ್ರೇಕ್ಷಕನಿದ್ದಾನೆ.
’ಆರೆಂಜ್’ ಚಿತ್ರದಲ್ಲಿ ರಾಜಕುಮಾರ ಚಿತ್ರದ ನಾಯಕಿ ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಎಸ್.ಎಸ್. ತಮನ್ ಸಂಗೀತ ನೀಡಿದ್ದರೆ ಸಂತೋಷ್ ರೈ ಪತ್ತಾಜೆ ಛಾಯಾಗ್ರಹಣ ನಿರ್ವಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com