ನಿರ್ಮಾಪಕರಿಗೆ ಹೆಚ್ಚಿನ ಆದ್ಯತೆ ನೀಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗಾಯದ ಹೊರತಾಗಿಯೂ ಯಜಮಾನ ಚಿತ್ರದ ಚಿತ್ರೀಕರಣಕ್ಕೆ ಮತ್ತೆ ಎಂಟ್ರಿಕೊಟ್ಟಿದ್ದಾರೆ.
ಯಜಮಾನ ಚಿತ್ರದ ಶೂಟಿಂಗ್ ವೇಳೆ ದರ್ಶನ್ ಎಡಗೈಗೆ ಗಾಯಾವಾಗಿತ್ತು. ಚಿತ್ರದ ಸಾಹಸ ದೃಶ್ಯವೊಂದರ ಚಿತ್ರೀಕರಣದ ವೇಳೆ ದರ್ಶನ್ ಅವರ ಕೈಗೆ ಗಾಯವಾಗಿತ್ತು ಎಂದು ಹೇಳಲಾಗುತ್ತಿತ್ತು. ಹೀಗಾಗಿ ಚಿತ್ರೀಕರಣದಿಂದ ದರ್ಶನ್ ದೂರ ಉಳಿದಿದ್ದರು.
ನಿರ್ಮಾಪಕರನ್ನು ಅನ್ನದಾತರೆಂದೇ ಕರೆಯುವ ದರ್ಶನ್ ಅವರು, ಗಾಯದ ಹೊರತಾಗಿಯು ಮೇ.18 ರಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.
ಇನ್ನು ನಿರ್ದೇಶಕ ಪೊನ್ ಕುಮಾರ್, ನಿರ್ಮಾಪಕ ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರೂ ಚುನಾವಣೆಗೆ ಹಿನ್ನಲೆಯಲ್ಲಿ ಚಿತ್ರೀಕರಣದಿಂದ ದೂರ ಉಳಿದಿದ್ದರು. ಇದೀಗ ಅವರೂ ಕೂಡ ನಾಳೆಯಿಂದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ.
ಚಿತ್ರಕ್ಕಾಗಿ ನಿರ್ಮಾಪಕರು ದೊಡ್ಡ ದೊಡ್ಡ ಸೆಟ್ ಗಳನ್ನು ಹಾಕಿದ್ದಾರೆ. ಸೆಟ್ ಗಳಿಗಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡಿದ್ದಾರೆ. ಹೀಗಾಗಿ ಚಿತ್ರೀಕರಣದ ದಿನಾಂಕವನ್ನು ಮುಂದಕ್ಕೆ ಹಾಕುವುದು ನನಗಿಷ್ಟವಿಲ್ಲ ಎಂದು ದರ್ಶನ್ ಅವರು ಹೇಳಿದ್ದಾರೆ.