

ನಾದಬ್ರಹ್ಮ ಎಂದು ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ ಸಂಗೀತ ನಿರ್ದೇಶಕ ಹಂಸಲೇಖ ಇಂದು ಸಂಗೀತದ ಜೊತೆಗೆ ನಿರ್ದೇಶನದ ಕೆಲಸವನ್ನು ಕೂಡ ಕೈಗೆತ್ತಿಕೊಂಡಿದ್ದಾರೆ. ಶಕುಂತಲಾ ಎಂಬ ಚಿತ್ರವನ್ನು ಕನ್ನಡ ಮತ್ತು ಹಿಂದಿಯಲ್ಲಿ ತಯಾರಿಸುತ್ತಿರುವ ಹಂಸಲೇಖರ ಈ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರದ ಬಗ್ಗೆ ಜೂನ್ 23ರಂದು ಅವರ ಹುಟ್ಟುಹಬ್ಬದ ದಿನ ಘೋಷಣೆ ಮಾಡಲಿದ್ದಾರೆ.
ಈ ವಿಷಯ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದ್ದು, ಶಕುಂತಲಾ ಒಂದು ಇತಿಹಾಸ ಆಧಾರಿತ ಚಿತ್ರವಾಗಿದೆ. ಬಿಎಲ್ ವೇಣು ಅವರು ಬರೆದ ಪುಸ್ತಕದಿಂದ ಹಂಸಲೇಖ ಶಕುಂತಲಾದ ಕಥೆಯನ್ನೆತ್ತಿಕೊಂಡಿದ್ದಾರೆ. ಚಿತ್ರದ ತಯಾರಿ ಭರದಿಂದ ಸಾಗುತ್ತಿದೆ.