ಹೆಣ್ಣಿನ ಪಾವಿತ್ರ್ಯತೆ ಆಕೆಯ ಯೋನಿಯಲ್ಲಿಲ್ಲ: ಮಿಲನ ನಟಿ ಪಾರ್ವತಿ ಮೆನನ್

Published On :
ತಿರುವನಂತಪುರಂ: ಮೀಟೂ ಆರೋಪ ಮಾಡಿದ್ದ ನಟಿ ಪಾರ್ವತಿ ಅವರು ಇದೀಗ ಮಹಿಳೆಯ ಪಾವಿತ್ರ್ಯತೆ ಆಕೆಯ ಯೋನಿಯಲ್ಲಿಲ್ಲ ಎಂದು ಹೇಳಿದ್ದಾರೆ.
ಶಬರಿಮಲೆ ದೇಗುಲಕ್ಕೆ ಮಹಿಳೆ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು ಇದೀಗ ಸುಪ್ರೀಂ ತೀರ್ಪಿನ ಪರ ನಟಿ ಪಾರ್ವತಿ ಬ್ಯಾಟಿಂಗ್ ಮಾಡಿದ್ದಾರೆ.
ಸುಪ್ರೀಂ ತೀರ್ಪಿನ ನಂತರ ಕೆಲ ಮಹಿಳೆಯರು ದೇವಾಲಯ ಪ್ರವೇಶಿಸುವ ಯತ್ನ ಮಾಡಿ ವಿಫಲರಾಗಿದ್ದರು. ಇದಗೀ ಈ ಬಗ್ಗೆ ಪಾರ್ವತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ತೀರ್ಪನ್ನು ಸ್ವಾಗತಿಸಿರುವ ಪಾರ್ವತಿ ಮುಟ್ಟಾಗುವುದರಿಂದಲೇ ಮಕ್ಕಳು ಜನಿಸುತ್ತಾರೆ. ಆದರೆ ಮುಟ್ಟಾದಾಗ ಅಪವಿತ್ರವೆಂದು ಯಾಕೆ ಪರಿಗಣಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಹಿಂದಿನಿಂದಲೂ ಕೂಡ ಮುಟ್ಟಾದಾಗ ಅಪವಿತ್ರಳು ಎಂಬ ಭಾವನೆಯನ್ನು ತಲೆಗೆ ತುಂಬಲಾಗಿದೆ. ಹೆಣ್ಣಿನ ಪಾವಿತ್ರ್ಯತೆ ಎನ್ನುವುದು ಕೇವಲ ಯೋನಿಯಲ್ಲಿಲ್ಲ ಎಂದು ಪಾರ್ವತಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtಸುಪ್ರೀಂ ಕೋರ್ಟ್KeralaಕೇರಳWomen Entryಪಾರ್ವತಿಮಹಿಳೆ ಪ್ರವೇಶಶಬರಿಮಲೆ ವಿವಾದParvathySabarimala Row
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


