ನವೆಂಬರ್ 17ಕ್ಕೆ ಲಂಡನ್‌ಗೆ ರಾಜು ಜೇಮ್ಸ್ ಬಾಂಡ್!

ಫಸ್ಟ್ ರ್ಯಾಂಕ್ ರಾಜು ಚಿತ್ರದ ಗುರುನಂದನ್ ನಟನೆಯ ರಾಜು ಜೇಮ್ಸ್ ಬಾಂಡ್ ಚಿತ್ರದ ಚಿತ್ರೀಕರಣಕ್ಕಾಗಿ ಚಿತ್ರತಂಡ ನವೆಂಬರ್ 17ಕ್ಕೆ ಲಂಡನ್ ಗೆ ಹಾರಲಿದೆ...
ಗುರುನಂದನ್
ಗುರುನಂದನ್
ಫಸ್ಟ್ ರ್ಯಾಂಕ್ ರಾಜು ಚಿತ್ರದ ಗುರುನಂದನ್ ನಟನೆಯ ರಾಜು ಜೇಮ್ಸ್ ಬಾಂಡ್ ಚಿತ್ರದ ಚಿತ್ರೀಕರಣಕ್ಕಾಗಿ ಚಿತ್ರತಂಡ ನವೆಂಬರ್ 17ಕ್ಕೆ ಲಂಡನ್ ಗೆ ಹಾರಲಿದೆ. 
ಲಂಡನ್ ನಲ್ಲಿ 10 ದಿನಗಳ ಕಾಲ ಚಿತ್ರದ ಚಿತ್ರೀಕರಣಕ್ಕೆ ಚಿತ್ರತಂಡ ನಿರ್ಧರಿಸಿದೆ. ಲಂಡನ್ ನಲ್ಲಿ ಕೆಲ ಹಾಡಿನ ಚಿತ್ರೀಕರಣ ಹಾಗೂ ದೃಶ್ಯಗಳನ್ನು ಚಿತ್ರತಂಡ ಸೆರೆಹಿಡಿಯಲಿದೆ. ಚಿತ್ರವನ್ನು ದೀಪಕ್ ಮದುವನಳ್ಳಿ ನಿರ್ದೇಶಿಸುತ್ತಿದ್ದಾರೆ. 
ಡಿಸೆಂಬರ್ ನೊಳಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲಿದೆ ಎಂದು ನಟ ಗುರುನಂದನ್ ತಿಳಿಸಿದ್ದಾರೆ. ಚಿತ್ರದ ಕಾಸ್ಟ್ಯೂಮ್ ಹಾಗೂ ತನ್ನ ಸ್ಟೈಲ್ ಕುರಿತಂತೆ ಗುರುನಂದನ್ ಉತ್ಸುಹಕರಾಗಿದ್ದಾರೆ. 
ರಾಜು ಜೇಮ್ಸ್ ಬಾಂಡ್ ಗೆ ನಾಯಕಿಯಾಗಿ ಮೃದುಳ ನಟಿಸುತ್ತಿದ್ದು ಕಿರುಣ್ ಬಾರ್ತೂರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ಮನೋಹರ್ ಜೋಷಿ ಅವರ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com