ಅರ್ಮಾನ್ ಕಂಠದಲ್ಲಿ ಕನ್ನಡ ಗೀತೆ: ಸೀತಾರಾಮ ಕಲ್ಯಾಣಕ್ಕಾಗಿ 'ನಿನ್ನ ರಾಜ ನಾನು' ಎಂದ ಗಾಯಕ!

ಖ್ಯಾತ ಗಾಯಕ ಅರ್ಮಾನ್ ಮಲಿಕ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಪ್ರೇಕ್ಷಕಾಭಿಮಾನಿಗಳನ್ನು ಸೆಳೆಯಲು ಸಜ್ಜಾಗಿರುವ ಅವರು ನಿಖಿಲ್ ಕುಮಾರ್...
ಸೀತಾರಾಮ ಕಲ್ಯಾಣ ಚಿತ್ರದ ದೃಶ್ಯ
ಸೀತಾರಾಮ ಕಲ್ಯಾಣ ಚಿತ್ರದ ದೃಶ್ಯ
ಬೆಂಗಳೂರು: ಖ್ಯಾತ ಗಾಯಕ ಅರ್ಮಾನ್ ಮಲಿಕ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಪ್ರೇಕ್ಷಕಾಭಿಮಾನಿಗಳನ್ನು ಸೆಳೆಯಲು ಸಜ್ಜಾಗಿರುವ ಅವರು ನಿಖಿಲ್ ಕುಮಾರ್, ರಚಿತಾ ರಾಮ್ ಅಭಿನಯದ "ಸೀತಾರಾಮ ಕಲ್ಯಾಣ" ಚಿತ್ರದಲ್ಲಿ ಹಿನ್ನೆಲೆ ಗಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಸೀತಾಮ ಕಲ್ಯಾಣ ಚಿತ್ರದ "ನಿನ್ನ ರಾಜ ನಾನು ನನ್ನ ರಾಣಿ ನೀನು" ಎನ್ನುವ ಸುಮಧುರ ಹಾಡು ಇದೀಗ ಬಿಡುಗಡೆಯಾಗಿದ್ದು ಈ ಹಾಡಿಗೆ ಅನೂಪ್ ಸಂಗೀತವಿದೆ.
ಸೋನು ನಿಗಮ್ ಬಳಿಕ ಅರ್ಮಾನ್ ಗೆ ಸಾಕಷ್ಟು ದೊಡ್ಡ ಅಭಿಮಾನಿ ಬಳಗವಿದೆ ಎಂದು ಹರ್ಷ ಹೇಳಿದ್ದಾರೆ."ಇದೊಂದು ವರ್ಣರಂಜಿತ ಪ್ರೇಮಗೀತೆ. ನಾಯಕ, ನಾಯಕಿಯರ ನಡುವೆ ನಡೆವ ಪ್ರೀತಿಯನ್ನು ಬಿಂಬಿಸುವ ಹಾಡು"ಮಹಿಳಾ ಗೀತರಚನಾಗಾರ್ತಿ ಸಾಯಿ ಸುಕನ್ಯಾ ರಚಿಸಿರುವ ಈ ಹಾಡನ್ನು ಸಂಪೂರ್ಣವಾಗಿ ಅರ್ಮಾನ್ ಅವರೇ ಹಾಡಿರುವುದು ಇನ್ನೊಂದು ವಿಶೇಷ.
ಹರ್ಷ ಈ ಹಾಡಿನ ಕೊರಿಯೋಗ್ರಫಿ ನೆರವೇರಿಸಿದ್ದಾರೆ.
ಚೆನ್ನಾಂಬಿಕಾ ಪ್ರೊಡಕ್ಷನ್ ನಿರ್ಮಾಣದ "ಸೀತಾರಾಮ ಕಲ್ಯಾಣ"ದಲ್ಲಿ ಶರತ್ ಕುಮಾರ್, ಬಾಲಿವುಡ್ ನಟ ಮಧೂ, ರವಿಶಂಕರ್, ಚಿಕ್ಕಣ್ಣ ಅಭಿನಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com