ಸಿನಿಮಾದ ಮೇಕಿಂಗ್, ಮ್ಯೂಸಿಕ್, ಡೈಲಾಗ್ ಎಲ್ಲವೂ ಟ್ರೆಂಡ್ ಸೃಷ್ಟಿಸಿದ್ದು, ಇದೊಂದು ಅದ್ಭುತ ಟ್ರೈಲರ್. ಮಾಮೂಲಿ ಸಲ್ಮಾನ್ ಖಾನ್ ಸಿನಿಮಾ ಇದಲ್ಲ. ಸಲ್ಮಾನ್ ಸಿನಿಮಾಗೂ ಮೀರಿದ ಸಿನಿಮಾವಿದು. ಅಲ್ಲದೇ ಸಂಭಾಷಣೆಯೂ ಭರ್ಜರಿಯಾಗಿದೆ. ಸಬ್ ಟೈಟಲ್ ನೋಡಿದರ ಖಂಡಿತಾ ಇದು ಹಿಂದಿ ಚಿತ್ರವಲ್ಲ ಎಂದು ತಿಳಿಯುತ್ತದೆ. ಆದರೆ ಚಿತ್ರದ ಸಿನಿಮಾಟೊಗ್ರಫಿ, ಮೇಕಿಂಗ್ ಸ್ಟೈಲ್ ಹಿಡಿದಿಟ್ಟುಕೊಳ್ಳುವ ತಾಕತ್ತಿದೆ. ಹಾಲಿವುಡ್ ಸಿನಿಮಾದ ಕ್ವಾಲಿಟಿ ‘ಕೆಜಿಎಫ್’ನಲ್ಲಿದೆ. ನಾನಂತೂ ಖಂಡಿತಾ ಸಿನಿಮಾ ನೋಡ್ತೀನಿ ಎಂದು ಹೇಳಿಕೊಂಡಿದ್ದಾನೆ.