ಕುಡಿದು ಚಾಲನೆ: ಮನಸೆಲ್ಲಾ ನೀನೇ ಚಿತ್ರ ನಟಿ ಗಾಯಿತ್ರಿ ರಘುರಾಮ್ ಬುಕ್!

ಕನ್ನಡದ ಮನಸೆಲ್ಲಾ ನೀನೇ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಗಾಯಿತ್ರಿ ರಘುರಾಮ್ ಕುಡಿದು ಚಾಲನೆ ಮಾಡಿದ ಆರೋಪದ ಮೇಲೆ ಬುಕ್ ಮಾಡಲಾಗಿದೆ...
ಗಾಯಿತ್ರಿ ರಘುರಾಮ್
ಗಾಯಿತ್ರಿ ರಘುರಾಮ್
Updated on
ಚೆನ್ನೈ: ಕನ್ನಡದ ಮನಸೆಲ್ಲಾ ನೀನೇ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಗಾಯಿತ್ರಿ ರಘುರಾಮ್ ಕುಡಿದು ಚಾಲನೆ ಮಾಡಿದ ಆರೋಪದ ಮೇಲೆ ಬುಕ್ ಮಾಡಲಾಗಿದೆ. 
ಶನಿವಾರ ರಾತ್ರಿ ಚೆನ್ನೈನ ಎಂಆರ್ಸಿ ನಗರದಲ್ಲಿರುವ ಸ್ಟಾರ್ ಹೋಟೆಲ್ ನಲ್ಲಿ ಚಿತ್ರರಂಗದವರು ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿ ಮುಗಿಸಿಕೊಂಡು ಬರುವಾಗ ಸಂಚಾರಿ ಪೊಲೀಸರು ನಟಿ ಗಾಯಿತ್ರಿ ರಘುರಾಮ್ ಕಾರು ತಡೆದು ತಪಾಸಣೆ ನಡೆಸಿದರು. 
ಆಗ ಗಾಯಿತ್ರಿ ಅವರು ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಟಿ ತಪಾಸಣೆ ವೇಳೆ ನೂರಾರು ಅಭಿಮಾನಿಗಳು ಸ್ಥಳದಲ್ಲಿ ನಟಿಯ ಫೋಟೋ ಹಾಗೂ ವಿಡಿಯೋವನ್ನು ತೆಗೆದುಕೊಳ್ಳುತ್ತಿದ್ದರಿಂದ ಕೂಡಲೇ ಪೊಲೀಸರು ನಟಿಯನ್ನು ತಮ್ಮ ವಾಹನದಲ್ಲಿ ಮನೆಗೆ ತಲುಪಿಸಿ ಆಕೆ ಚಲಾಯಿಸುತ್ತಿದ್ದ ಕಾರನ್ನು ವಶಕ್ಕೆ ಪಡೆದರು. 
ಗಾಯಿತ್ರಿ ಅವರು ಕನ್ನಡ ಸೇರಿದಂತೆ ಒಟ್ಟು 14 ಚಿತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com