ಅಯೋಗ್ಯ ನಿರ್ಮಾಪಕರ ಮುಂದಿನ ಸಿನಿಮಾ ರಂಗ ಬಿಇ, ಎಂಟೆಕ್ ನಲ್ಲಿ ವಿಕ್ಕಿ ವರುಣ್ ಮತ್ತು ಶಿಲ್ಪಾ ಮಂಜುನಾಥ್

ಕಾಲೇಜ್ ಕುಮಾರ ನಂತರ ವಿಕ್ಕಿ ವರುಣ್ ರಂಗ ಬಿಇ, ಎಂಟೆಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ದುನಿಯಾ ಸೂರಿ ಅವರ ಕೆಂಡ ಸಂಪಿಗೆ ಸಿನಿಮಾ ಮೂಲಕ ,,.,
ಶಿಲ್ಪಾ ಮಂಜುನಾಥ್
ಶಿಲ್ಪಾ ಮಂಜುನಾಥ್
Updated on
ಬೆಂಗಳೂರು: ಕಾಲೇಜ್ ಕುಮಾರ ನಂತರ ವಿಕ್ಕಿ ವರುಣ್ ರಂಗ ಬಿಇ, ಎಂಟೆಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ದುನಿಯಾ ಸೂರಿ ಅವರ ಕೆಂಡ ಸಂಪಿಗೆ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ್ದ ವಿಕ್ಕಿ ವಿಕ್ರಮ್ ಮೂರನೇ ಸಿನಿಮಾ ಇದಾಗಿದೆ.
ನಾಗೇಶ್ ನಿರ್ದೇಶನದ ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾ ಇದಾಗಿದೆ. ನಾಗೇಶ್ ಕಳೆದ 10 ವರ್ಷಗಳಿಂದ ವಿವಿಧ ಹಿರಿಯ ನಿರ್ದೇಶಕರುಗಳ ಬಳಿ ಕೆಲಸ ಮಾಡಿದ್ದಾರೆ, ನಿರ್ದೇಶಕ ಶಶಾಂಕ್ ಅವರ ಬಳಿಯೂ ಸಹ ಕೆಲಸ ಮಾಡಿದ್ದಾರೆ, ಚಮಕ್, ಅಯೋಗ್ಯ ಸಿನಿಮಾ ಗಳನ್ನು ನೀಡಿರುವ ಕ್ರಿಸ್ಚಲ್ ಪಾರ್ಕ್ ಸಿನಿಮಾದ ಆರನೇ ಸಿನಿಮಾ ಇದಾಗಿದೆ.
ರಂಗ ಬಿಇ, ಎಂಟೆಕ್ ಸಿನಿಮಾಗಾಗಿ ನಿರ್ಮಾಪಕ ಟಿ.ಆರ್ ಚಂದ್ರಶೇಖರ್,  ಶಿಲ್ಪಾ ಮಂಜುನಾಥ್ ಅವರನ್ನು ನಾಯಕಿಯಾಗಿ ಕರೆ ತಂದಿದ್ದಾರೆ, ಶಿಲ್ಪಾ ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ, ಡಿಸೆಂಬರ್ ಮೊದಲ ವಾರದಲ್ಲಿ  ಮುಹೂರ್ತ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com