ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇನ್ನು ಮುಂದೆ ತಮ್ಮ ಟ್ವಿಟರ್ನಲ್ಲಿ ಬೇರೆ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ನನ್ನ ಪ್ರೀತಿ ಪಾತ್ರರಿಗೆ ಶುಭಾಶಯ ಕೋರಲು ಮಾತ್ರ ಟ್ವೀಟ್ ಮಾಡುತ್ತೇನೆ. ಆಧುನಿಕತೆ ದಿಕ್ಕುತಪ್ಪಿದೆ. ವಯಸ್ಸು ಮಾಗುತ್ತಿದೆ. ಹೊಸತನ ಕಲಿಯಲು ಮನಸು ಬಯಸುತ್ತಿದೆ. ಲೋಕದ ಡೊಂಕಿಗಿಂತ ನಮ್ಮ ಬದುಕಿನ ಮೇಲೆ ಗಮನ ಹರಿಸುವ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.